ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಪ್ರಿಯಾಂಕಾ ನನಗೆ ವಯಸ್ಸು 30 ಆಗಿದೆ. ಜೊತೆಗೆ ನನಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಅಚ್ಚರಿ ಹೇಳಿಕೆಯನ್ನು ಕೊಟ್ಟಿದ್ದಾರೆ.
ಹೌದು..ಬಿಗ್‍ಬಾಸ್ ನೀಡಿದ್ದ ಒಂದು ವಿಶೇಷ ಚಟುವಟಿಕೆಗಾಗಿ ಪ್ರಿಯಾಂಕಾ ಈ ರೀತಿ ಸುಳ್ಳು ಹೇಳಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಒಂದು ವಿಶೇಷ ಚಟುವಟಿಕೆಯನ್ನು ನೀಡಿತ್ತು. ಅದೇನೆಂದರೆ ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಒಂದು ಚಾಟ್ ಶೋ ನಡೆಸಿಕೊಡಬೇಕಿತ್ತು. ಅದರಲ್ಲಿ ಹರೀಶ್ ರಾಜ್ ನಿರೂಪಕರಾಗಿದ್ದು, ಮನೆಯ ಇತರೆ ಸದಸ್ಯರಿಗೆ ಪ್ರಶ್ನೆ ಕೇಳಬೇಕಿತ್ತು. ಆ ಪ್ರಶ್ನೆಗಳಿಗೆ ಮನೆಯ ಸದಸ್ಯರು ಸುಳ್ಳು ಉತ್ತರವನ್ನೇ ನೀಡಬೇಕಿತ್ತು.
ಆಗ ಪ್ರಿಯಾಂಕಾಗೆ, ನೀವು ತುಂಬಾ ಒಳ್ಳೆಯ ನಟಿ ಎಂದು ಹರೀಶ್ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ಅಯ್ಯೋ ನಾನು ಇಲ್ಲಿಯವರೆಗೂ ಏನೂ ಮಾಡೇ ಇಲ್ಲ ಎಂದಿದ್ದಾರೆ. ಇನ್ನೂ ನಿಮಗೆ ಮದುವೆನೇ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ನನ್ನ ವಯಸ್ಸು 30, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.
ಇದೇ ವೇಳೆ ನಿಮಗೆ ಹುಬ್ಬು ಏರಿಸುವುದು ತುಂಬಾನೇ ಇಷ್ಟ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ನನಗೆ ಹುಬ್ಬು ಏರಿಸಲು ಸ್ವಲ್ಪನೂ ಇಷ್ಟವಿಲ್ಲ. ನನಗೆ ನಟನೆ ಮಾಡಲು ಬರಲ್ಲ. ಆದರೆ ವಿಲನ್ ಪಾತ್ರ ಮಾಡಬೇಕಿತ್ತು. ಹೀಗಾಗಿ ಹುಬ್ಬು ಏರಿಸುತ್ತೀನಿ ಎಂದು ಸುಳ್ಳಿನ ಕಥೆಯನ್ನೇ ಹೇಳಿದ್ದಾರೆ.
Comments are closed.