ಬಿಗ್ ಬಾಸ್ ಮನೆಯ ಇಬ್ಬರು ಸದಸ್ಯರಿಗೆ ಸೂಕ್ತ ಕಾರಣ ನೀಡಿ ಮುತ್ತು ನೀಡಿ, ಇನ್ನಿಬ್ಬರ ಕೆನ್ನೆಗೆ ಹೊಡೆಯಬೇಕು ಎಂಬ ಟಾಸ್ಕ್‌ನ್ನು ಚಂದನಾಳಿಗೆ ಬಿಗ್ ಬಾಸ್ ನೀಡಿದ್ದರು. ಆಗ ಚಂದನಾ ಅವರು ಶೈನ್ ಶೆಟ್ಟಿ, ವಾಸುಕಿ ವೈಭವ್ ಕೆನ್ನೆಗೆ ಮುತ್ತು ನೀಡಿದ್ದರು. ಜೊತೆಗೆ ಅವರು ಕಿಶನ್, ಹರೀಶ್ ರಾಜ್ ಕೆನ್ನೆಗೆ ಹೊಡೆದಿದ್ದಾರೆ. ಕಿಶನ್ ಕೆನ್ನೆಗೆ ಚಂದನಾ ಹೊಡೆಯಲು ನೀಡಿದ ಕಾರಣ ಬಿಗ್ ಬಾಸ್ ಮನೆಯಲ್ಲಿ ಕಿಶನ್ ಮತ್ತು ಚಂದನಾ ಸಂಬಂಧದಲ್ಲಿ ಕಿಚ್ಚು ಹಚ್ಚಿದೆ. ಈ ಮೊದಲು ಅವರ ಮಧ್ಯದಲ್ಲಿ ಇದ್ದ ಆ ಆತ್ಮೀಯತೆ, ಸ್ನೇಹ ಈಗ ಇಲ್ಲ.
ಚಂದನಾರನ್ನು ನಿಜಕ್ಕೂ ಇಷ್ಟಪಟ್ಟಿದ್ರಾ ಕಿಶನ್?
ಕಿಶನ್ ಅವರು ಚಂದನಾರನ್ನು ಇಷ್ಟಪಟ್ಟಿದ್ದರಂತೆ, ತದನಂತರದಲ್ಲಿ ಆ ವಿಷಯವನ್ನು ಅವರು ಕಾಮಿಡಿಯಾಗಿಯೂ ತೆಗೆದುಕೊಂಡಿದ್ದರಂತೆ. ನಿಜವಾಗಿಯೂ ಕಿಶನ್ ತನ್ನನ್ನು ಪ್ರೀತಿಸುತ್ತಿದ್ದಾರೋ ಇಲ್ಲವೋ ಎಂಬ ಸಂದೇಹ ಚಂದನಾಗೆ ಕಾಡಿತ್ತಂತೆ. ಒಂದು ವೇಳೆ ಕಿಶನ್ ಪ್ರೀತಿಯನ್ನು ಚಂದನಾ ಸೀರಿಯಸ್ ಆಗಿ ತಗೊಂಡಿದ್ದರೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿತ್ತು ಎಂಬುದು ಚಂದನಾ ಅಭಿಪ್ರಾಯ.
ಭಾವನೆ ಜೊತೆ ಆಟ ಆಡಿದ್ರಾ ಕಿಶನ್?
“ಯಾರ ಭಾವನೆ ಜೊತೆಗೂ ನಾನು ಇದುವರೆಗೂ ಆಟ ಆಡಿಲ್ಲ. ಸೀರಿಯಸ್ ಆಗಿ ನಾನು ನಿಮ್ಮನ್ನು ಪ್ರೀತಿ ಮಾಡಿದ್ದೇನೆ ಹೊರತು ಯಾವತ್ತೂ ಕಾಮಿಡಿಯಾಗಿ ಇದನ್ನು ತೆಗೆದುಕೊಂಡಿಲ್ಲ. ಪ್ರೀತಿಗೆ ಅದರದ್ದೇ ಆದ ಮೌಲ್ಯವಿದೆ, ನಾನು ಯಾರ ಬಳಿಯೂ ಪ್ರೀತಿ ಭಿಕ್ಷೆ ಬೇಡುತ್ತಿಲ್ಲ. ರಕ್ಷಾ ಬಂದಮೇಲೆ ಕೂಡ ನಾನು ನಿಮ್ಮನ್ನು ಸೀರಿಯಸ್ ಆಗಿ ಲವ್ ಮಾಡುತ್ತಿದ್ದೇನೆ ಎಂದು ಹೇಳಿದ್ದೆ. ತದನಂತರದಲ್ಲಿ ನೀವು ಸೀರಿಯಸ್ ಆಗಿ ಲವ್ ಮಾಡಿದ್ರೆ ನಮ್ಮಿಬ್ಬರ ವಿಷಯ ಸೀರಿಯಸ್ ಆಗಿರುತ್ತಿತ್ತು. ಆದರೆ ನೀವು ನನ್ನ ಪ್ರೀತಿಯನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಹೀಗಾಗಿ ನಾನು ಒಂದು ಹೆಜ್ಜೆ ಹಿಂದೆ ಹೋಗಿ ತಂಗಿ ಎಂದು ಕರೆದೆ. ಆದರೆ ನಾನು ನಿಮ್ಮ ಭಾವನೆಗಳ ಜೊತೆ ಆಟ ಆಡಿಲ್ಲ, ದಯವಿಟ್ಟು ಸಮಾಜಕ್ಕೆ ತಪ್ಪು ಸಂದೇಶ ಕೊಡಬೇಡಿ” ಎಂದು ಕಿಶನ್ ಅವರು ಚಂದನಾ ಬಳಿ ವಾದ ಮಾಡಿದ್ದಾರೆ. ತದನಂತರದಲ್ಲಿ ನಡೆದ ಟಾಸ್ಕ್‌ನಲ್ಲಿ ಚಂದನಾ ಅವರು ಕಿಶನ್‌ಗೆ ವಿಲನ್ ಎಂಬ ಹೆಸರು ನೀಡಿದ್ದಾರೆ.
ಕಿಶನ್ ಪ್ರೀತಿಸುತ್ತಿಲ್ಲ ಚಂದನಾ
ಚಂದನಾ ಇದುವರೆಗೂ ಕಿಶನ್ ಪ್ರೀತಿ ವಿಚಾರವನ್ನು ನಗುತ್ತಲೇ ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಎಂದಿಗೂ ಕೂಡ ಕಿಶನ್ ಮೇಲೆ ಲವ್ ಇದೆ ಎಂದು ಅವರು ಹೇಳಿಲ್ಲ. ದೀಪಿಕಾ ಬಳಿ ಚಂದನಾರನ್ನು ಲವ್ ಮಾಡುತ್ತಿರೋದು ತಮಾಷೆಗಾಗಿ ಎಂದು ಕಿಶನ್ ಹೇಳಿದ್ದು ಚಂದನಾಗೆ ಬೇಸರ ತಂದಿತ್ತು. ಡೇಟಿಂಗ್ ಹೋದಾಗ ನನ್ನ ಹತ್ತಿರ ಕಿಶನ್ ಅವರು ಏನು ಹೇಳಿದ್ರು ಅಂತ ದೀಪಿಕಾ ಅವರು ಚಂದನಾ ಬಳಿ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದಾಗ ಕಿಶನ್ ಡಬಲ್ ಗೇಮ್ ಆಡುತ್ತಿದ್ದಾರೆ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಕಾಣುತ್ತಿದೆ. ಜೊತೆಗೆ ಸಿಕ್ಕ ಸಿಕ್ಕವರಿಗೆಲ್ಲ ಕಿಶನ್ ಮುತ್ತು ನೀಡುತ್ತಿರುವುದು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ 24 ಗಂಟೆಯ ದೃಶ್ಯಗಳನ್ನು ವೀಕ್ಷಕರು ನೋಡುವುದು ದಿನಕ್ಕೆ ಕೇವಲ ಒಂದೂವರೆ ಗಂಟೆ ಮಾತ್ರ. ಹೀಗಾಗಿ ಗೊತ್ತಿಲ್ಲದೆ ಬಿಗ್ ಬಾಸ್ ಸ್ಪರ್ಧಿಗಳು ಹೀಗೆ ಎಂದು ಅಭಿಪ್ರಾಯಕ್ಕೆ ಬರಲಾಗುವುದಿಲ್ಲ.
Comments are closed.