ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ವಾಸುಕಿ ವೈಭವ್ ಅವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಈ ವಿಚಾರವನ್ನು ವಾಸುಕಿ ವೈಭವ್ ಅವರಿಗೆ ತಿಳಿಸಿದ್ದಾರೆ.
ಹೌದು. ವಾಸುಕಿ ವೈಭವ್ ಅವರ ಅಪ್ಪನ ಸಂಬಂಧಿ ಶ್ರೀವಸ್ತಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಬಿಗ್‍ಬಾಸ್ ವಾಸುಕಿಯನ್ನು ರೂಮಿಗೆ ಕರೆದಿದ್ದರು. ಆಗ ವಾಸುಕಿ ನಿಮ್ಮ ಮನೆಯವರಿಂದ ಒಂದು ಸುದ್ದಿ ಬಂದಿದೆ. ಇದು ಪ್ರಮುಖವಾದ ಸುದ್ದಿಯಾಗಿದೆ. ಹಾಗಾಗಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಮಾವ ಶ್ರೀವಸ್ತಾ ಅವರು ತೀವ್ರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ.
ಈ ಸುದ್ದಿ ತಿಳಿದು ತಕ್ಷಣ ವಾಸುಕಿ ಬಿಗ್‍ಬಾಸ್ ದಯವಿಟ್ಟು ನಾನು ಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮುಗಿದಿವೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ. ತಕ್ಷಣ ವಾಸುಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ. ನಂತರ ನೀವು ಇಚ್ಛಿಸಿದರೆ ಶೈನ್‍ನ ಕರೆಸುವುದಾಗಿ ಕೇಳಿದ್ದಾರೆ. ವಾಸುಕಿ ಕರೆಸಿ ಎಂದ ತಕ್ಷಣ ಬಿಗ್‍ಬಾಸ್ ಶೈನ್‍ನ ರೂಮಿಗೆ ಕರೆಸಿದ್ದಾರೆ. ವಾಸುಕಿಯ ಅಳುವಿನ ಶಬ್ದ ಕೇಳಿ ಶೈನ್ ಓಡಿ ಹೋಗಿ ವಾಸುಕಿಯನ್ನು ಏನಾಯಿತು ಎಂದು ಕೇಳಿದ್ದಾರೆ.
ಆಗ ವಾಸುಕಿ ನಮ್ಮ ಸಂಬಂಧಿಯೊಬ್ಬರು ನಿಧನರಾಗಿದ್ದಾರೆ ಎಂದು ಹೇಳಿ ಜೋರಾಗಿ ಅತ್ತಿದ್ದಾರೆ. ಆಗ ಶೈನ್ ಸಮಾಧಾನ ಮಾಡಿದ್ದಾರೆ. ಆದರೂ ವಾಸುಕಿ ಜೋರಾಗಿ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ. ನಂತರ ಮನೆಯವರ ಬಳಿ ನಮ್ಮ ಅಪ್ಪನ ಸಂಬಂಧಿ ಮಾವ ಮೃತಪಟ್ಟಿದ್ದಾರೆ. ಅವರು ತುಂಬಾ ಬೇಕಾದವರು, ಹೋಗಬೇಕು ಎಂದು ಕೇಳಿದೆ. ಆದರೆ ಈಗಾಗಲೇ ಅಂತ್ಯಸಂಸ್ಕಾರ ಮುಗಿದಿದೆ ಎಂದು ಬಿಗ್‍ಬಾಸ್ ತಿಳಿಸಿದರು ಎಂದು ಮತ್ತೆ ಕಣ್ಣೀರು ಹಾಕಿದ್ದಾರೆ. ಆಗ ಮನೆಯವರೆಲ್ಲಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳಿ ಎಂದು ಹೇಳಿ ವಾಸುಕಿಯನ್ನು ಸಮಾಧಾನ ಪಡಿಸಿದ್ದಾರೆ.
Comments are closed.