ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಂತೆ ಇತ್ತೀಚೆಗೆ ನಡೆದ 77ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಈ ವೇಳೆ ಮಾಧ್ಯಮದ ಎದುರು ಪ್ರಿಯಾಂಕಾ ತನ್ನ ಗಂಡನ ಜೊತೆ ಲಿಪ್ ಲಾಕ್ ಮಾಡಿದ್ದಾರೆ.
ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ನಿಕ್ ಮತ್ತು ಪ್ರಿಯಾಂಕಾ ಆಗಮಿಸಿದಂತೆ ಎಲ್ಲರ ಕಣ್ಣು ಇವರ ಮೇಲೆ ಬಿದ್ದಿದೆ. ಈ ವೇಳೆ ಪರ್ತಕರ್ತನೊಬ್ಬ ಪ್ರಿಯಾಂಕ ಬಳಿ ನಿಕ್ಗೆ ಕಿಸ್ ಕೊಡುವಂತೆ ಕೇಳಿದ್ದಾರೆ. ಆಗ ನಟಿ ಪ್ರಿಯಾಂಕಾ ನಿಕ್ ಲಿಪ್ಗೆ ಕಿಸ್ ಮಾಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪ್ರಿಯಾಂಕಾ ಕಿಸ್ ಕೊಡುತ್ತಿದ್ದಂತೆ ಲಿಪ್ ಸ್ಟಿಕ್ ಬಣ್ಣ ಮಿಕ್ ತುಟಿಯಲ್ಲಿ ಅಂಟಿಕೊಂಡಿದೆ. ನಂತರ ಪ್ರಿಯಾಂಕಾ ಅವರೇ ಕ್ಯಾಮೆರಾದ ಮುಂದೆ ಒರೆಸುತ್ತಾರೆ. ಸದ್ಯ ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದ್ದು, ಈ ಸೂಪರ್ ಜೋಡಿಯ ವಿಡಿಯೋ ನೋಡಿ ಅನೇಕರು ಕಾಮೆಂಟ್ ಬರೆಯುತ್ತಿದ್ದಾರೆ.
Comments are closed.