ಬೆಂಗಳೂರು: ದೀಪಿಕಾ ಪಡುಕೋಣೆ ನೀವು ರೀಲ್ ಮತ್ತು ರಿಯಲ್ ನಲ್ಲಿಯೂ ಬೋಲ್ಡ್ ಎಂದು ಫೋಟೋ ಹಾಕಿ ನಟ ಪ್ರಕಾಶ್ ರೈ ಮೆಚ್ಚುಗೆ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರ ನಟನೆಯ ಪದ್ಮಾವತ್, ಬಾಜೀರಾವ್ ಮಸ್ತಾನಿ, ರಾಮ್‍ಲೀಲಾ ಮತ್ತು ಛಪಾಕ್ ಸಿನಿಮಾದ ಫೋಟೋ ಹಾಕಿದ್ದಾರೆ. ಕೆಳಗೆ ಜೆಎನ್‍ಯುಗೆ ಭೇಟಿ ನೀಡಿರುವ ಫೋಟೋ ಹಾಕಿದ್ದಾರೆ. ರೀಲ್ ಮತ್ತು ರಿಯಲ್ ಲೈಫ್ ನಲ್ಲಿ ನೀವು ಧೈರ್ಯವಂತೆ (ಬೋಲ್ಡ್) ಎಂದು ಬರೆಯಲಾಗಿದೆ. ನಿಜವಾದ ಭಾರತೀಯಳಾಗಿರುವುದಕ್ಕೆ ದೀಪಿಕಾ ಪಡುಕೋಣೆ ಅವರಿಗೆ ಧನ್ಯವಾದ ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.
ಪ್ರಕಾಶ್ ರೈ ಟ್ವೀಟ್ ಗೆ ಪರ-ವಿರೋಧ ಚರ್ಚೆಗಳ ಆರಂಭಗೊಂಡಿವೆ. ಕೆಲವರು ದೀಪಿಕಾ ಪಡುಕೋಣೆ ಅವರ ನಡೆಗೆ ತಮ್ಮ ಬೆಂಬಲ ಸೂಚಿಸಿದ್ರೆ, ಮತ್ತೆ ಕೆಲವರು ಸಿನಿಮಾ ಪ್ರಚಾರಕ್ಕಾಗಿ ದೀಪಿಕಾ ಜೆಎನ್‍ಯು ವಿಷಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‍ಯುಗೆ ಮಂಗಳವಾರ ಸಂಜೆ ಸುಮಾರು 7.45 ಕ್ಕೆ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೆನೀಡದೆ ವಾಪಸ್ ಆಗಿದ್ದರು.
ಕಳೆದ ಬಾನುವಾರ ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ನುಗಿದ್ದ ಮುಸುಕು ದಾರಿಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Comments are closed.