ಮುಂಬೈ: ಬಾಲಿವುಡ್ ನಟಿ ಪೂಜಾ ಹೆಗ್ಡೆ ಅವರನ್ನು ನೋಡಲು ಅಭಿಮಾನಿಯೊಬ್ಬ 5 ದಿನ ಫುಟ್‍ಪಾತ್‍ನಲ್ಲಿ ಮಲಗಿದ್ದು, ಆತನನ್ನು ನಟಿ ಭೇಟಿ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಅಭಿಮಾನಿ ಭಾಸ್ಕರ್ ರಾವ್ ನಟಿ ಪೂಜಾರನ್ನು ನೋಡಲು ಮುಂಬೈಗೆ ಬಂದಿದ್ದನು. ಪೂಜಾರನ್ನು ಭೇಟಿ ಮಾಡುವ ಸಲುವಾಗಿ ಭಾಸ್ಕರ್ 5 ದಿನಗಳ ಕಾಲ ಆತ ಫುಟ್‍ಪಾತ್‍ನಲ್ಲಿ ಮಲಗಿದ್ದನು. ಭಾಸ್ಕರ್ ಅಭಿಮಾನ ಕಂಡ ಪೂಜಾ ಆತನನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಭೇಟಿ ಮಾಡಿದ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಪೂಜಾ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, ಭಾಸ್ಕರ್ ರಾವ್ ಮುಂಬೈಗೆ ಬಂದು 5 ದಿನ ನನ್ನನ್ನು ನೋಡಲು ಕಾದಿದ್ದಕ್ಕೆ ಧನ್ಯವಾದಗಳು. ನಿಮ್ಮ ಈ ಅಭಿಮಾನಕ್ಕೆ ನಾನು ಮನಸೋತಿದ್ದೇನೆ. ಆದರೆ ನನ್ನ ಅಭಿಮಾನಿಗಳು ಇಷ್ಟು ಕಷ್ಟಪಡುತ್ತಿರುವುದನ್ನು ನೋಡಿ ನನಗೆ ದುಃಖವಾಗುತ್ತಿದೆ. ನೀವು ರಸ್ತೆಯಲ್ಲಿ ಮಲಗುವುದನ್ನು ನೋಡಲು ನಾನು ಎಂದಿಗೂ ಬಯಸುವುದಿಲ್ಲ. ನೀವು ಎಲ್ಲಿದ್ದರೂ ನಿಮ್ಮ ಪ್ರೀತಿಯನ್ನು ನಾನು ಫೀಲ್ ಮಾಡುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಪೂಜಾ ಜಿಮ್‍ಯಿಂದ ಬರುತ್ತಿದ್ದಂತೆ ಅಭಿಮಾನಿ ಭಾಸ್ಕರ್‍ನನ್ನು ಭೇಟಿ ಮಾಡಿದ್ದಾರೆ. ಭಾಸ್ಕರ್ ತನ್ನನ್ನು ಭೇಟಿ ಮಾಡಲು ಅನುಭವಿಸಿದ ಕಷ್ಟಗಳನ್ನು ಪೂಜಾರಿಗೆ ತಿಳಿದಾಗ ಅವರು ಮೂಕವಿಸ್ಮಿತರಾದರು. ಬಳಿಕ ಪೂಜಾ ಅಭಿಮಾನಿಯ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಪೂಜಾರನ್ನು ಭೇಟಿ ಮಾಡಿದ ಬಳಿಕ ಭಾಸ್ಕರ್ ತನ್ನ ಊರಿಗೆ ಹಿಂತಿರುಗಿದನು. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಪೂಜಾ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Comments are closed.