ಬಾಲಿವುಡ್ ನಟಿ ಹಾಗೂ ಕನ್ನಡದ ‘ಈ ಪ್ರೀತಿ ಯಾಕೆ ಭೂಮಿ ಮೇಲಿದೆ’ ಚಿತ್ರದಲ್ಲಿ ವಿಶೇಷ ಗೀತೆ ಸೊಂಟ ಬಳುಕಿಸಿರುವ ಬೆಡಗಿ ಮಲ್ಲಿಕಾ ಶೆರಾವತ್ ಮೈಕ್ರೋಸಾಫ್ಟ್ ವ್ಯವಸ್ಥಾಪಕ ಬಿಲ್ ಗೇಟ್ಸ್‌ರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದಾರೆ.
ಕೆಲ ಸಮಯದಿಂದ ಚಿತ್ರಗಳಿಂದ ದೂರ ಉಳಿದಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಕ್ರಿಯಾಶೀಲವಾಗಿರುವ ಮಲ್ಲಿಕಾ ಶೆರಾವತ್ ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಲ್ ಗೇಟ್ಸ್‌ರನ್ನು ಭೇಟಿಯಾಗಿ ಮಹಿಳಾ ಸಬಲೀಕರಣ, ಮಹಿಳಾ ಹಕ್ಕುಗಳ ಬಗ್ಗೆ ಚರ್ಚಿಸಿದ್ದಾರೆ.
ಬಿಲ್ ಗೇಟ್ಸ್ ಜೊತೆಗಿನ ಫೋಟೋವನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, “ಬಿಲ್ ಗೇಟ್ಸ್‌ರನ್ನು ಭೇಟಿಯಾಗಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದು ತುಂಬಾ ಖುಷಿಯ ಸಂಗತಿ” ಎಂದಿದ್ದಾರೆ. ಬಾಲಿವುಡ್‍ನಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ಮರ್ಡರ್, ಗುರು, ಪ್ಯಾರ್ ಕಿ ಸೈಡ್ ಎಫೆಕ್ಟ್ಸ್ ಹಿಸ್, ಟೈಮ್ಸ್ ರೈಡರ್ಸ್ ಚಿತ್ರಗಳಲ್ಲಿ ಮಲ್ಲಿಕಾ ಅಭಿನಯಿಸಿದ್ದಾರೆ. ಈ ಸಿನಿಮಾಗಳು ಮಲ್ಲಿಕಾರಿಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿವೆ.
ಇದಿಷ್ಟೇ ಅಲ್ಲದೆ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಸೀಸನ್ 13ರಲ್ಲಿ ಸಹ ಕಾಣಿಸಿಕೊಂಡಿದ್ದರು. 2019ರಲ್ಲಿ ಪ್ರಸಾರವಾದ ಏಕ್ತಾ ಕಪೂರ್ ನಿರ್ಮಾಣದ ತುಷಾರ್ ಕಪೂರ್ ನಟನೆಯ ‘ಭೂ ಸಬ್ಕಿ ಫತೇಗಿ’ ವೆಬ್ ಸೀರೀಸ್‌ನಲ್ಲೂ ನಟಿಸಿದ್ದಾರೆ ಮಲ್ಲಿಕಾ.
Comments are closed.