ಮನೋರಂಜನೆ

‘ಬಿಗ್ ಬಾಸ್​’ನಲ್ಲಿ ವಿನ್ನರ್ ಯಾರು…? ನಾಳೆ ಸಿಗಲಿದೆ ಉತ್ತರ ! ಇಂದು ಔಟ್ ಆಗುವವರು ಯಾರು…?

Pinterest LinkedIn Tumblr

ಇಂದು ಮತ್ತು ನಾಳೆ ಬಿಗ್​ಬಾಸ್​ ಕನ್ನಡ 7ನೇ ಸೀಸನ್​ನ ಫಿನಾಲೆ ಪ್ರಸಾರವಾಗಲಿದೆ.

18 ಸ್ಪರ್ಧಿಗಳಿಂದ ಆರಂಭವಾದ ಬಿಗ್ ಬಾಸ್​ ಕನ್ನಡ 7 ವಿಜೇತರು ಯಾರೆಂಬುದು ನಾಳೆ ಬಹಿರಂಗವಾಗಲಿದೆ.

ಬಿಗ್ ಬಾಸ್​ ಮನೆಯಲ್ಲಿ 111 ದಿನಗಳನ್ನು ಕಳೆದಿರುವ ಐವರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಇವರಲ್ಲಿ ಒಬ್ಬರು ಇಂದು ಎಲಿಮಿನೇಟ್ ಆಗಲಿದ್ದಾರೆ.

ಉಳಿದವರಲ್ಲಿ ವಿನ್ನರ್ ಮತ್ತು ಇಬ್ಬರು ರನ್ನರ್ ಅಪ್​ಗಳು ಯಾರೆಂಬ ಕುತೂಹಲಕ್ಕೆ ಇನ್ನೊಂದು ದಿನದಲ್ಲಿ ತೆರೆ ಬೀಳಲಿದೆ.

ಶುಕ್ರವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆಯೊಳಗಿರುವ ಐವರು ಸ್ಪರ್ಧಿಗಳು ಫುಲ್ ಎಂಜಾಯ್ ಮಾಡಿದ್ದಾರೆ.

ತನಗಾಗಿ ಮೂವರೂ ಪುರುಷ ಸ್ಪರ್ಧಿಗಳು ಹೆಣ್ಣಿನ ವೇಷ ಹಾಕಿಕೊಳ್ಳಬೇಕೆಂದು ಭೂಮಿ ಶೆಟ್ಟಿ ಒತ್ತಾಯಿಸಿದರು.

ಭೂಮಿ ಶೆಟ್ಟಿಯ ಬೇಡಿಕೆಗೆ ಓಗೊಟ್ಟ ಕುರಿ ಪ್ರತಾಪ್, ವಾಸುಕಿ ವೈಭವ್, ಶೈನ್ ಶೆಟ್ಟಿ ಹೆಣ್ಣಿನ ವೇಷ ಧರಿಸಿ ಬಿಗ್ ಬಾಸ್ ಮನೆ ತುಂಬ ಓಡಾಡಿದರು.

ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿಯ ಉಡುಪು ಧರಿಸಿದ ಮೂವರು ಹೆಣ್ಣಿನಂತೆ ಸಿಂಗರಿಸಿಕೊಂಡು ರಂಜಿಸಿದರು.

ಬಿಗ್ ಬಾಸ್​ ರಿಯಾಲಿಟಿ ಶೋನ ಈ ಸೀಸನ್​ನಲ್ಲಿ​ ನಿನ್ನೆಗೆ ಟಾಸ್ಕ್​ಗಳು ಮುಗಿದ ಕಾರಣ ಸ್ಪರ್ಧಿಗಳಿಗೆ ಏನಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು.

ಆಗ ಭೂಮಿ ಶೆಟ್ಟಿ ನಮ್ಮ ಜೊತೆಗಿರುವ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು.

ಹಾಗೇ, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.

ಹೀಗಾಗಿ, ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು.

ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ರಂಜಿಸಿದರು.

ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಕೂಡ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಪಂಚೆಯುಟ್ಟು, ಶರ್ಟ್​ ತೊಟ್ಟು ಮೂವರು ಹುಡುಗರನ್ನು ರೇಗಿಸಿ ಮಜಾ ಮಾಡಿದರು.

18 ಸ್ಪರ್ಧಿಗಳಿಂದ ಆರಂಭವಾದ ಬಿಗ್ ಬಾಸ್​ ಕನ್ನಡ 7 ವಿಜೇತರು ಯಾರೆಂಬುದು ನಾಳೆ ಬಹಿರಂಗವಾಗಲಿದೆ.

Comments are closed.