ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಬೋಲ್ಡ್ ಡ್ರೆಸ್ ಧರಿಸಿ ತನ್ನ ತಂದೆಯ ಜೊತೆ ‘ಮಲಂಗ್’ ಚಿತ್ರದ ಸ್ಕ್ರೀನಿಂಗ್‍ಗೆ ಹೋಗಿದ್ದರು. ಸೋನಂ ಡ್ರೆಸ್ ನೋಡಿದ ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸೋನಂ ಕಪೂರ್ ತಮ್ಮ ತಂದೆ ಅನಿಲ್ ಕಪೂರ್ ಜೊತೆ ‘ಮಲಂಗ್’ ಚಿತ್ರದ ಸ್ಕ್ರೀನಿಂಗ್‍ಗೆ ಹೋಗಿದ್ದರು. ಈ ವೇಳೆ ಸೋನಂ ಅವರು ಕಪ್ಪು ಬಣ್ಣದ ಬೋಲ್ಡ್ ಡ್ರೆಸ್ ಧರಿಸಿದ್ದು, ಅವರ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೋನಂ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ನೆಟ್ಟಿಗರು ಸೋನಂ ಅವರ ವಿಡಿಯೋ ನೋಡಿ, ‘ನಿಮ್ಮ ತಂದೆಯ ಮುಂದೆ ಪ್ರೈವೇಟ್ ಪಾರ್ಟ್ ಕಾಣುವಂತೆ ಉಡುಪು ಧರಿಸಿದ್ದೀರಾ. ನಿಮ್ಮಂತವರಿಗೆ ನಾಚಿಕೆನೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ತಂದೆಯ ಮುಂದೆ ಸೋನಂ ಈ ರೀತಿ ದೇಹ ಕಾಣುವ ಬಟ್ಟೆ ಧರಿಸಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ನೀವು ನಿಮ್ಮ ತಂದೆ ಜೊತೆ ಇರುವಾಗ ಒಳ್ಳೆಯ ಉಡುಪನ್ನು ಧರಿಸಿ’ ಎಂದು ಸೋನಂ ಅವರಿಗೆ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಸೋನಂ, ಕರೀನಾ ಕಪೂರ್ ಅವರ ಸಹೋದರ ಸಂಬಂಧಿಯಾಗಿರುವ ಅರ್ಮಾನ್ ಜೈನ್ ಆರತಕ್ಷತೆಗೆ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಸೋನಂ ಸೀರೆ ಧರಿಸಿದ್ದರು. ಸೋನಂ ಅವರ ಈ ಲುಕ್ ನೋಡಿ ನೆಟ್ಟಿಗರು, ‘ಅಜ್ಜಿ’ ಎಂದು ಹೇಳುವ ಮೂಲಕ ಟ್ರೋಲ್ ಮಾಡಿದ್ದರು. ಈ ಹಿಂದೆಯೂ ಹಲವು ಬಾರಿ ಸೋನಂ ತಾವು ಧರಿಸುವ ಉಡುಪಿನಿಂದ ಸಾಕಷ್ಟು ಟ್ರೋಲ್ ಆಗಿದ್ದರು.
ಕಳೆದ ವರ್ಷ ಸೋನಂ, ‘ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ’ ಹಾಗೂ ‘ದಿ ಝೋಯಾ ಫ್ಯಾಕ್ಟರ್’ ಚಿತ್ರದಲ್ಲಿ ನಟಿಸಿದ್ದರು. ಇನ್ನು ಇಂದು ಬಿಡುಗಡೆಯಾದ ‘ಮಲಂಗ್’ ಚಿತ್ರದಲ್ಲಿ ಅನಿಲ್ ಕಪೂರ್ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸೋನಂ ಚಿತ್ರ ವೀಕ್ಷಿಸಲು ತಮ್ಮ ತಂದೆ ಜೊತೆಗೆ ಬಂದಿದ್ದರು.
Comments are closed.