ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ವಿರುದ್ಧ ಫೈರಿಂಗ್ ಸ್ಟಾರ್ ನಟ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.
ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಟ್ರೈಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಟ್ರೈಲರ್ ವಿಚಾರವಾಗಿ ಮಾತನಾಡಿರುವ ಹುಚ್ಚ ವೆಂಕಟ್ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರೈಲರ್‍ನಲ್ಲಿ ನಾಯಕ ರಾನಾ ಜೊತೆಗೆ ರಚಿತಾ ರಾಮ್ ಲಿಪ್‍ಲಾಕ್ ಹಾಗೂ ಸಿಗರೇಟ್ ಸೇದುವ ದೃಶ್ಯ ನೋಡಿದ ವೆಂಕಟ್ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ನಿರ್ದೇಶಕ ಪ್ರೇಮ್ ಅವರಿಗೆ ಒಂದಿಷ್ಟು ಮನವಿ ಮಾಡಿಕೊಂಡಿದ್ದಾರೆ.
ವೆಂಕಟ್ ಹೇಳಿದ್ದೇನು?
ನನ್ ಮಗಂದ್ ಡೈಲಾಗ್… ಇದು ರಚಿತಾ ರಾಮ್ ಅವರಿಗೆ ಹೇಳುತ್ತಿರೋದು. ಯಾಕ್ರೀ.. ಯಾಕ್ರೀ.. ಈ ಥರಹದ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ? ನೀವು ಮಾಡಿರುವುದು ಏನು? ಸಿಗರೇಟ್ ಸೇದುವುದಂತೆ, ಲಿಪ್‍ಕಿಸ್ ಅಂತೆ… ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಡೈರೆಕ್ಟರ್ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್ ಈ ಥರಾ ಮಾಡ್ತೀರಾ?
ಕಳೆದ ಸಿನಿಮಾದಲ್ಲೂ (ಐ ಲವ್ ಯೂ) ಹೀಗೆ ಮಾಡಿದ್ರಿ. ಈ ಸಿನಿಮಾದಲ್ಲೂ ಮಾಡಿದ್ದೀರಾ. ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ ಬೇರೆ ಕಡೆಗೆ ತೋರಿಸಿ. ಹೀಗೆ ಮಾಡೋದನ್ನು ಪ್ರತಿಭೆ ಅಂತರಾ? ನನ್ ಮಗಂದ್ ತೂ….
ಇಂತ ಸೀನ್‍ಗಳಿಂದ ಎಷ್ಟೋ ಜನ ಹಾಳಾಗುತ್ತಾರೆ ಅಂತ ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್ ಮಾಡಿ ಸಿಗರೇಟ್ ಸೇದಿದ್ರೇನೆ ತಪ್ಪು. ಅಂತಹದ್ರಲ್ಲಿ ನೀವು ಸಿಗರೇಟ್ ಸೇದೋದು, ಲಿಪ್ ಕಿಸ್ ಮಾಡೋದು ಅಂದ್ರೆ ಏನ್ ಅರ್ಥ? ಇಲ್ಯಾರೂ ಕೇಳೋರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ.
ಈ ಹಿಂದೆ ಕನ್ನಡ ಇಂಡಸ್ಟ್ರಿ ಅಂದರೆ ಹೇಗಿತ್ತು? ಕನ್ನಡ ಇಂಸ್ಟ್ರಿ ಅಂದ್ರೆ ಒಂದೇ ಒಂದು ಅಶ್ಲೀಲ ಇಲ್ಲ ಎನ್ನುವಂತಿತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್ ನಿನಗೆ ಇದು ಬೇಕಿತ್ತಾ? ಈ ರೀತಿಯ ಶಾಟ್ ಇಡೋದು ಬೇಕಿತ್ತಾ? ಇದ್ರಿಂದ ನೀನು ಜನರಿಗೆ ತೋರಿಸೋದಾದ್ರೂ ಏನು? ಆ ದೃಶ್ಯವನ್ನು ತೆಗೆದು ಹಾಕು.
ರಚಿತಾ ರಾಮ್ ಅವ್ರೆ ನಾಳೆ ನೀವು ಮದ್ವೆ ಆಗ್ಬೇಕು. ನಿಮ್ಮ ಗಂಡ ಇದನ್ನ ನೋಡಬೇಕು. ನೋಡಿ ನಿಮಗೇನ್ ಅಂತಾನೆ. ಬೇಶ್ ಎನ್ನುತ್ತಾನಾ? ಚಿಕ್ಕ ಕಾರಣ ಸಿಕ್ರೆ ಸಾಕು ಡಿವೋರ್ಸ್ ಕೊಡ್ತಾರೆ. ಅಂಥ್ರದಲ್ಲಿ ನೋಡಿ ನೀವು ಏನ್ ಮಾಡ್ತಾ ಇದ್ದೀರಾ? ಸಿನಿಮಾ ರಂಗವೇ ನಿಮಗೆ ಕೊನೆಯಲ್ಲ. ನೀವು ಮದ್ವೆ ಆಗ್ಬೇಕು, ತಾಯಿ ಆಗಬೇಕು ನೆನಪಿರಲಿ.
ರಚಿತಾ ರಾಮ್ ಅವ್ರ ತಂದೆ-ತಾಯಿಗೂ ನನ್ನದೊಂದು ವಿನಂತಿ. ಇನ್ಮೇಲೆ ನಿಮ್ಮ ಮಗಳಿಗೆ ನೀವು ಬುದ್ಧಿ ಹೇಳಿ. ನಾನು ಎಲ್ಲ ರೀತಿ ಹೇಳಿ ಮುಗಿಸಿದ್ದೇನೆ. ಲಿಪ್‍ಕಿಸ್ ಸೀನ್‍ಗಳನ್ನು ನಿಮಗೆ ನೋಡೋಕೆ ಆಗುತ್ತಾ? ಈ ವಿಚಾರದಲ್ಲಿ ನಿಮ್ಮನ್ನ ಎಳೆದಿದ್ದಕ್ಕೆ ತಪ್ಪು ತಿಳಿಯಬೇಡಿ.
ಸಿನಿಮಾದಿಂದ ಲಿಪ್‍ಲಾಕ್, ಸಿಗರೇಟ್ ಸೇದುವ ಸೀನ್ ತೆಗೆದುಹಾಕಬೇಕು. ಕನ್ನಡ ಇಂಡಸ್ಟ್ರಿ ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುವುದು ನನಗೆ ಇಷ್ಟವಿಲ್ಲ. ಇಲ್ಲಿ ಕಲೆಗೆ ಬೆಲೆ ಕೊಡಲಾಗುತ್ತದೆ. ಹೆಣ್ಣು ಮಕ್ಕಳು ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಸಿರಿಯಲ್‍ಗಳಲ್ಲೂ ಬಂದಿದೆ. ಈ ಬಗ್ಗೆ ಯಾರೂ ಯಾಕೆ ಹೋರಾಟ ಮಾಡುತ್ತಿಲ್ಲ?
ಆ ಬಂದು ಸೀನ್ ತೆಗೆದು ಹಾಕಿದ್ರೆ ಸಿನಿಮಾ ಓಡಲ್ವಾ? ಸಿನಿಮಾದ ಹೀರೋಗೆ ಅಣ್ಣನಾಗಿ ಹೇಳುತ್ತಿದ್ದೇನೆ, ನೀನು ಫಸ್ಟ್ ಟೈಮ್ ನಾಯಕನಾಗಿ ಕನ್ನಡ ಇಂಡಸ್ಟ್ರಿ ಬರುತ್ತಿದ್ದಿಯಾ. ಉತ್ತಮ ಸಿನಿಮಾದೊಂದಿಗೆ ಕಾಲಿಡು. ನಾನು ಮಾಡುವ ಸಿನಿಮಾದಲ್ಲಿ ಐಟಂ ಸಾಂಗ್ ಹಾಕ್ತಾರೆ ಎನ್ನುವ ಭಯದಿಂದ ಅನೇಕರು ನನ್ನ ಕೈಬಿಟ್ಟಿದ್ದಾರೆ. ಯಾಕಂದ್ರೆ ನಾನು ಸಿನಿಮಾ ಕಥೆಯನ್ನು ಸಂಪೂರ್ಣವಾಗಿ ಓದಿ ಓಕೆ ಎನ್ನುತ್ತೇನೆ. ಕೆಟ್ಟ ಸೀನ್ ಇದ್ರೆ ಸಿನಿಮಾ ಬೇಡ ರಿಜೆಕ್ಟ್ ಮಾಡ್ತೀನಿ.
ರಚಿತಾ ರಾಮ್ ಅವ್ರೆ ಎಷ್ಟೋ ನಟಿಯರ ಜೀವನ ಹಾಳಾಗಿದೆ. ನೀವು ಅರ್ಥ ಮಾಡಿಕೊಂಡು ಪಾತ್ರ ನಿರ್ವಹಿಸಿ.
Comments are closed.