ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ಸ್ವತಃ ಅನುಷ್ಕಾ ಸ್ಪಷ್ಟನೆ ನೀಡಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅನುಷ್ಕಾ ಇದೆಲ್ಲಾ ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅನುಷ್ಕಾ, ನಾನು ಯಾವ ಕ್ರಿಕೆಟ್ ಆಟಗಾರನನ್ನು ಮದುವೆ ಆಗುತ್ತಿಲ್ಲ. ಯಾವುದಾದರು ವಿಷಯ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಪರಿಶೀಲಿಸಿ. ನನ್ನ ಮದುವೆಯ ನಿರ್ಧಾರವನ್ನು ನಾನು ನನ್ನ ಪೋಷಕರಿಗೆ ಬಿಟ್ಟಿದ್ದೇನೆ. ನನ್ನ ತಂದೆ-ತಾಯಿ ಆಯ್ಕೆ ಮಾಡಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ. ಆದರೆ ಯಾವುದೇ ಕ್ರಿಕೆಟ್ ಆಟಗಾರನನ್ನು ನಾನು ಮದುವೆ ಆಗುತ್ತಿಲ್ಲ ಎಂದರು.
ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.
Comments are closed.