ಅಂತರಾಷ್ಟ್ರೀಯ

ನಟ ಜಾಕಿ ಚಾನ್‍ಗೆ ಕೊರೊನಾ ವೈರಸ್ – ಸ್ಪಷ್ಟನೆ

Pinterest LinkedIn Tumblr


ಬೀಜಿಂಗ್: ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಕೊರೊನಾ ವೈರಸ್ಸಿನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ.

ಜಾಕಿ ಚಾನ್ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಜಾಕಿ ಚಾನ್ ಇನ್‍ಸ್ಟಾದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಾವು ಕ್ಷೇಮವಾಗಿ ಇರುವುದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ತಮ್ಮ ಇನ್‍ಸ್ಟಾದಲ್ಲಿ ಜಾಕಿ, “ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿ ಹಾಗೂ ಕ್ಷೇಮವಾಗಿದ್ದೇನೆ. ದಯವಿಟ್ಟು ಯಾರು ನನ್ನ ಆರೋಗ್ಯದ ಬಗ್ಗೆ ಆತಂಕಪಡಬೇಡಿ. ಎಲ್ಲರೂ ಕ್ಷೇಮವಾಗಿ ಹಾಗೂ ಆರೋಗ್ಯವಾಗಿರಲಿ ಎಂದು ನಾನು ಬಯಸುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ.

ಸದ್ಯ ವಿಶ್ವದ್ಯಂತ ಅಭಿಮಾನಿಗಳು ಜಾಕಿ ಚಾನ್ ಅವರಿಗೆ ಮಾಸ್ಕ್‍ಗಳು ಸೇರಿದಂತೆ ಹಲವು ವಿಶೇಷ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ನೀಡಿದ ಮಾಸ್ಕ್ ಗಳನ್ನು ಬೇರೆ ಬೇರೆ ಸಂಸ್ಥೆಗಳಿಗೆ ದಾನ ಮಾಡುವಂತೆ ಜಾಕಿ ಚಾನ್ ತಮ್ಮ ಸಿಬ್ಬಂದಿ ಬಳಿ ಹೇಳಿದ್ದಾರೆ.

65 ವರ್ಷದ ಜಾಕಿ ಚಾನ್ ಹಾಂಗ್‍ಕಾಂಗ್‍ನಲ್ಲಿ ಜನಿಸಿದ್ದು, ಅಲ್ಲಿ ಈಗ 90ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‍ಗೆ ತುತ್ತಾಗಿದ್ದಾರೆ. ಚೀನಾದಲ್ಲಿ ಇದುವೆರಗೂ ಕೊರೊನಾ ವೈರಸ್‍ಗೆ 2,924 ಮಂದಿ ಮೃತಪಟ್ಟಿದ್ದು, 85,469 ಮಂದಿಗೆ ಕೊರೊನಾದಿಂದ ಬಳಲುತ್ತಿದ್ದಾರೆ.

Comments are closed.