ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಆನಂದ್ ಇಂದು ಮಧ್ಯಾಹ್ನ 1.40ಕ್ಕೆ (ಭಾನುವಾರ) ಬೆಂಗಳೂರಿನ ರಂಗದೊರೆ ಆಸ್ಪತ್ರೆಯಲ್ಲಿ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಚಾಮರಾಜಪೇಟೆಯಲ್ಲಿ ಮುಗಿಸಲಾಗಿದೆ. ಇವರು ಟಿ.ಎನ್.ಸೀತಾರಾಮ್ ಅವರ ‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ಎಸ್.ಪಿ.ವರ್ಣೇಕರ್ ಪಾತ್ರದಲ್ಲಿ ನಟಿಸಿದ್ದರು.
‘ವಿಜಯ ಕರ್ನಾಟಕ’ದ ಜೊತೆಗೆ ಮಾತನಾಡಿರುವ ಟಿ.ಎನ್.ಸೀತಾರಾಮ್ ಅವರು “ಲಾಲ್ ಬಾಗ್‌ನಲ್ಲಿ ನಾನು ವಾಕಿಂಗ್ ಹೋಗುವ ವೇಳೆ ಅವರು ಎರಡರಿಂದ ಮೂರು ದಿನ ಸಿಕ್ಕರು. ಅವರೊಬ್ಬ ಕಲಾವಿದ ಅನ್ನೋದು ಗೊತ್ತಿರಲಿಲ್ಲ. ನಾನು ಟಿ.ಎನ್.ಸೀತಾರಾಮ್ ಅಂತ ಪರಿಚಯ ಮಾಡಿಕೊಂಡೆ. ಆಗ ಅವರು ಗೊತ್ತು ಅಂದ್ರು. ಆ ಸಮಯದಲ್ಲಿ ನಾನು ‘ಮುಕ್ತ ಮುಕ್ತ’ ಧಾರಾವಾಹಿ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದೆ. ಒಂದು ಎಸ್‌ಪಿ ಪಾತ್ರ ಮಾಡುವವರು ಬೇಕಿತ್ತು.. ಹೀಗಾಗಿ ಆನಂದ್ ಅವರನ್ನು ಆಯ್ಕೆ ಮಾಡಿಕೊಂಡೆ.ತುಂಬ ಒಳ್ಳೆಯ ವ್ಯಕ್ತಿ ಅವರು” ಎಂದಿದ್ದಾರೆ.
ಆನಂದ್ ಅವರ ಪತ್ನಿ ರಮಾದೇವಿ ಕೆಎಂಎಫ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ ವಿವೇಕ್ ಖಾಸಗಿ ಕಂಪನಿ ಉದ್ಯೋಗಿ, ಮಗಳು ಮಧುವಂತಿ ವಿವಾಹಿತಳು.
Comments are closed.