ಮುಂಬೈ: ಹೆಬ್ಬುಲಿ ಬೆಡಗಿ ಅಮಲಾ ಪೌಲ್ ಗೌಪ್ಯವಾಗಿ ತಮ್ಮ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಮಲಾ ಪತಿ, ಮುಂಬೈ ಮೂಲಕದ ಗಾಯಕ ಭವಿಂದರ್ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ, “ಮದುವೆಯ ಫೋಟೋಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು. ಫೋಟೋಗಳು ವೈರಲ್ ಆಗುತ್ತಿದ್ದಂತೆ ಭವಿಂದರ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಭವಿಂದರ್ ತಮ್ಮ ಪೋಸ್ಟ್ ಡಿಲೀಟ್ ಮಾಡುವಷ್ಟರಲ್ಲಿ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ವರದಿಗಳ ಪ್ರಕಾರ ಭವಿಂದರ್ ಹಾಗೂ ಅಮಲಾ ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ಮದುವೆಯಾಗಿದ್ದಾರೆ. ಅಲ್ಲದೆ ಇಬ್ಬರು ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡಿಲ್ಲ.
ನಟಿ ಅಮಲಾ ಪೌಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಈಗ ಎರಡನೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಜೊತೆ ಅಮಲಾ ಹಸೆಮಣೆ ಏರಿದ್ದರು. ಆದರೆ ಮೂರು ವರ್ಷ ಸಾಂಸಾರಿಕ ಜೀವನ ನಡೆಸಿದ್ದು, ಬಳಿಕ ಇಬ್ಬರ ದೂರವಾಗಿದ್ದರು.
Comments are closed.