ಮನೋರಂಜನೆ

ಕೊರೊನಾ ಭೀತಿಯಿಂದ ಒಂದಾದ ವಿಚ್ಛೇದಿತ ಹೃತಿಕ್ ರೋಷನ್, ಸುಸ್ಸೇನ್‍

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಹೃತಿಕ್ ರೋಷನ್ ಮತ್ತು ಪತ್ನಿ ಸುಸ್ಸೇನ್ ಖಾನ್ ದಂಪತಿ ಈಗಾಗಲೇ ವಿಚ್ಛೇದನ ಪಡೆದು ವರ್ಷಗಳೇ ಕಳೆದಿದೆ. ಆದರೆ ಈಗ ಕೊರೊನಾ ವೈರಸ್ ಭೀತಿಯಿಂದ ಮತ್ತೆ ದಂಪತಿ ಒಂದಾಗಿದ್ದಾರೆ.

ವಿಚ್ಛೇದನ ಪಡೆದಿದ್ದರೂ ಹೃತಿಕ್, ಸುಸ್ಸೇನ್ ತಮ್ಮ ಮಕ್ಕಳು ರೇಹಾನ್ ಮತ್ತು ರಿದಾನ್ ಪಾಲಿಗೆ ಈಗಲೂ ತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೋಸ್ಕರ ಈ ದಂಪತಿ ಒಂದಾಗಿದ್ದಾರೆ. ಸದ್ಯ ಕ್ವಾರೆಂಟೈನ್ ಸಮಯವನ್ನು ಕಳೆಯಲು ಹೃತಿಕ್ ತಮ್ಮ ಜುಹು ಮನೆಗೆ ಮಕ್ಕಳು ಜೊತೆ ಶಿಫ್ಟ್ ಆಗಿದ್ದು, ಅವರಿಗೆ ಸುಸ್ಸೇನ್ ಕೂಡ ಸಾಥ್ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ದೂರವಿರಲು ಮನೆಯಲ್ಲಿ ಇರುವುದು ಅನಿವಾರ್ಯವಾಗಿದೆ. ಸದ್ಯ ಸುಸ್ಸೇನ್ ಹಾಗೂ ಮಕ್ಕಳ ಜೊತೆ ತಮ್ಮ ಕ್ವಾರೆಂಟೈನ್ ಸಮಯ ಕಳೆಯುತ್ತಿರುವ ಹೃತಿಕ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ನಲ್ಲಿ ದೇಶವು ಲಾಕ್‍ಡೌನ್‍ನಲ್ಲಿ ಇರೋದನ್ನ ರೂಢಿ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಮಕ್ಕಳು ನಮ್ಮಿಂದ ದೂರವಿದ್ದರೆ ಹೆತ್ತವರಿಗೆ ಸಹಿಸೋದಿಕ್ಕೆ ಆಗೋದಿಲ್ಲ. ಇಂದು ದೇಶ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಇಡೀ ವಿಶ್ವ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ವಿಚಾರದಲ್ಲಿ ಒಗ್ಗಟ್ಟು ತೋರುತ್ತಿರುವುದನ್ನು ನೋಡಿದರೆ ಹೃದಯತುಂಬಿ ಬರುತ್ತದೆ. ನನ್ನ ಮಾಜಿ ಪತ್ನಿ ಸುಸ್ಸೇನ್ ಮಕ್ಕಳಿಗೋಸ್ಕರ ತಾತ್ಕಾಲಿಕವಾಗಿ ನನ್ನ ಮನೆಗೆ ಬಂದಿದ್ದಾಳೆ. ಇದರಿಂದ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಎರಡೂ ಸಿಗುತ್ತಿದೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ಪ್ರೋತ್ಸಾಹ ನೀಡಿದ್ದಕ್ಕೆ ಸುಸ್ಸೇನ್‍ಗೆ ಧನ್ಯವಾದ ಎಂದು ಬರೆದು ಸುಸ್ಸೇನ್ ಫೋಟೋವನ್ನು ಹೃತಿಕ್ ಹಂಚಿಕೊಂಡಿದ್ದಾರೆ.

17 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಹೃತಿಕ್, ಸುಸ್ಸೇನ್ 2014ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವಿಚ್ಛೇದನ ಪಡೆದು ಆರು ವರ್ಷಗಳು ಕಳೆಯುತ್ತಿದೆ. ಆದರೂ ಸಹ ಹೃತಿಕ್, ಸುಸ್ಸೇನ್ ಒಳ್ಳೆಯ ಸ್ನೇಹಿತರಾಗಿ, ಮಕ್ಕಳಿಗಾಗಿ ಪೋಷಕರ ಕರ್ತವ್ಯವನ್ನು ಒಂದಾಗಿ ನಿರ್ವಹಿಸುತ್ತಿದ್ದಾರೆ.

ಹೃತಿಕ್, ಸುಸ್ಸೇನ್ ವಿಚ್ಛೇದನ ಪಡೆದಿದ್ದರೂ ಮಕ್ಕಳಿಗಾಗಿ ತಂದೆ-ತಾಯಿಯಾಗಿ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ದಂಪತಿ ಹೋಗುತ್ತಾರೆ, ಜೊತೆಗೆ ಡಿನ್ನರ್, ಶಾಪಿಂಗ್ ಮಾಡುತ್ತಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮಹತ್ವರ ಘೋಷಣೆಯನ್ನು ಮಾಡಿದ್ದರು. ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ಈ 21 ದಿನ ಎಲ್ಲರೂ ಮನೆಯಲ್ಲಿಯೇ ಇರಬೇಕು. ಯಾರೂ ಹೊರಗೆ ಬರಬಾರದು ಎಂದು ಮೋದಿ ಅವರು ಸೂಚಿಸಿದ್ದರು.

Comments are closed.