ಪ್ರಖ್ಯಾತ ತೆಲುಗು ನಿರೂಪಕಿ ಶ್ರೀಮುಖಿ ವಿರುದ್ಧ ಎಪ್‌ಐಆರ್ ದಾಖಲಾಗಿದೆ. ಅದು ಎರಡು ವರ್ಷಗಳ ಹಿಂದಿನ ಕಾಮಿಡಿ ಸ್ಕಿಟ್ ಇಟ್ಟುಕೊಂಡು ದೂರು ನೀಡಲಾಗಿದೆ. ಆ ಎಪ್‌ಐಆರ್ ಕಾಪಿಯಲ್ಲಿ ಟಿವಿ ವಾಹಿನಿಯ ಹೆಸರನ್ನು ನಮೂದಿಸಲಾಗಿದೆ. ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿ ಆರೋಪ ಹೊರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ದೂರು ದಾಖಲಿಸಲು ಕಾರಣ ಏನು? ಯಾರು ಕಂಪ್ಲೇಂಟ್ ಕೊಟ್ಟಿದ್ದು?
ಆಂಧ್ರದ ವಿದ್ಯಾನಗರ ನಿವಾಸಿ ವೆಂಕಟರಾಮ ಶರ್ಮಾ ಈ ದೂರು ದಾಖಲಿಸಿದ್ದಾರೆ. ‘ಜೂಲಕಟಕ’ಶೋನಲ್ಲಿ ಬ್ರಾಹ್ಮಣರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಲಾಗಿತ್ತಂತೆ. ಕಳೆದ ಸೋಮವಾರ ರಾತ್ರಿ ಈ ದೂರು ದಾಖಲಾಗಿದೆ. ಶೋವೊಂದರಲ್ಲಿ ಅವಹೇಳನಕಾರಿ ಮಾತುಗಳನ್ನು ಆಡಿದ್ದರ ಬಗ್ಗೆ ಈ ದೂರಿನಲ್ಲಿ ಪ್ರಶ್ನಿಸಲಾಗಿದೆ. ಬಂಜಾರಾ ಹಿಲ್ಸ್ ಠಾಣೆಯ ಎಸಿಪಿ ಕೆ.ಶ್ರೀನಿವಾಸ್ ರಾವ್ ಅವರು ಆ ವಿಡಿಯೋ ಕ್ಲಿಪ್ ನೋಡಿ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ನಿರೂಪಕಿ ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆ ಏನು?
ಈ ಬಗ್ಗೆ ಹೈದರಾಬಾದ್ ಟೈಮ್ಸ್ ಜೊತೆಗೆ ಮಾತನಾಡಿದ ಶ್ರೀಮುಖಿ ‘ಆ ಶೋ ಪ್ರಸಾರ ಆಗಿದ್ದು 2018ರಲ್ಲಿ. ಇದು ಮೊದಲ ಬಾರಿಗೆ ಪ್ರಸಾರ ಆದಾಗಲೂ ಕೂಡ ಯಾರೂ ಏನೂ ಹೇಳಿರಲಿಲ್ಲ. ಒಂದು ಶೋ ನಡೆದು 2 ವರ್ಷಗಳ ನಂತರದಲ್ಲಿ ಯಾಕೆ ಎಪಿಸೋಡ್ ನೋಡಿ ದೂರು ದಾಖಲಿಸಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ. ಯಾವ ವಿಡಿಯೋ ಕ್ಲಿಪ್ ನೋಡಿ ಹೇಳುತ್ತಿದ್ದಾರೆ, ಅದರಲ್ಲಿ ಏನು ಕಂಟೆಂಟ್ ಇದೆ ಎಂಬುದು ಕೂಡ ತಿಳಿದಿಲ್ಲ. ನಾನು ಆ ವಿಡಿಯೋ ಕ್ಲಿಪ್ ನೋಡಿದ ಬಳಿಕ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಾನು ತಪ್ಪು ಮಾಡಿದ್ದಲ್ಲಿ, ಒಂದು ಸಮುದಾಯದ ಜನರ ಭಾವನೆಗೆ ಧಕ್ಕೆ ತಂದಿದ್ದೇ ಹೌದು ಎಂದಾದರೆ ನಾನು ಕ್ಷಮೆ ಕೇಳುವೆ’ ಎಂದಿದ್ದಾರೆ.
ಪೊಲಿಸರ ತನಿಖೆಗೆ ಸಹಕಾರ ಕೊಡ್ತೀನಿ ಎಂದ ಶ್ರೀಮುಖಿ
ಬಿಗ್ ಬಾಸ್ ತೆಲುಗು 3ರಲ್ಲಿಯೂ ಭಾಗವಹಿಸಿದ್ದ ನಿರೂಪಕಿ ‘ಆ ಶೋನ ಕಂಟೆಂಟ್ ಬಗ್ಗೆ ನಾನು ಜವಾಬ್ದಾರಳಲ್ಲ ಎಂದು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅದೊಂದು ಕಾಮಿಡಿ ಶೋ ಎಂದೂ ಕೂಡ ಅವರು ಹೇಳಿದ್ದಾರೆ. ‘ಬೇರೆಯವರ ಭಾವನೆಗೆ ಧಕ್ಕೆ ತರಬೇಕು, ನೋಯಿಸಬೇಕು ಎಂಬುದು ನನ್ನ ಉದ್ದೇಶವಲ್ಲ. ಎಲ್ಲ ಸಮುದಾಯದ ಜನರ ಬಗ್ಗೆ ನನಗೆ ಸಮಾನ ಗೌರವವಿದೆ. ಪೊಲೀಸ್ ಅವರ ತನಿಖೆಗೆ ನಾನು ಸಹಕಾರ ನೀಡುತ್ತೇನೆ’ ಎಂದಿದ್ದಾರೆ.
ಶ್ರೀಮುಖಿ ಬಿಗ್ ಬಾಸ್‌ನಿಂದ ಪಡೆದ ಹಣವೆಷ್ಟು?
ಶ್ರೀಮುಖಿ 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಅಂತಿಮವಾಗಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಆದರೆ ಇಷ್ಟು ದಿನಗಳ ಕಾಲ ಮನೆಯಲ್ಲಿ ಈ ಮನೆಯಲ್ಲಿ ಇದ್ದಿದ್ದಕ್ಕಾಗಿ ಅವರಿಗೆ ಸಿಕ್ಕಿರುವುದು ಬರೋಬ್ಬರಿ 1 ಕೋಟಿ ರೂಪಾಯಿಗಳಂತೆ! ಆದರೆ ಗೆದ್ದ ಸ್ಪರ್ಧಿಗೆ ನೀಡಿರುವುದು 50 ಲಕ್ಷ ರೂಪಾಯಿ. ರನ್ನರ್ ಅಪ್ ಇದಕ್ಕಿಂತ ಹೆಚ್ಚಿನ ಹಣವನ್ನು ಸಂಭಾವನೆ ರೂಪದಲ್ಲೇ ಪಡೆದುಕೊಂಡಿದ್ದಾರೆ ಎಂಬುದು ಮೂಲಗಳ ಮಾಹಿತಿ.
Comments are closed.