ಮನೋರಂಜನೆ

ಲಾಕ್‍ಡೌನ್ ಉಲ್ಲಂಘಿಸಿ ಪಾರ್ಟಿ ಮಾಡಿದ ಪೂನಂ ಪಾಂಡೆ ಬಂಧನ

Pinterest LinkedIn Tumblr

ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ಮತ್ತವರ ಬಾಯ್‍ಫ್ರೆಂಡ್ ವಿರುದ್ಧ ಮುಂಬೈ ಪೊಲೀಸರು ಭಾನುವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ. ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಮಾಡಿದ್ದಕ್ಕೆ ಈ ಕ್ರಮಕೈಗೊಳ್ಳಲಾಗಿದೆ.

ಪೂನಂ ಪಾಂಡೆ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿಸಿದ ಬಳಿಕ ಇವರನ್ನು ಬಿಡುಗಡೆ ಮಾಡಲಾಗಿದೆ. ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಭಾನುವಾರ ರಾತ್ರಿ 8.05ಕ್ಕೆ ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಡುತ್ತಾ ಇರುವುದನ್ನು ಗಮನಿಸಿದ ಮೆರೈನ್ ಡ್ರೈವ್ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಪೂನಂ ಪಾಂಡೆ ಬಾಯ್‍ಫ್ರೆಂಡ್‍ನನ್ನು ಬಾಂದ್ರಾದಲ್ಲಿ (ವೆಸ್ಟ್ ) ವಾಸವಾಗಿರುವ ಚಿತ್ರ ನಿರ್ದೇಶಕ ಸಾಮ್ ಅಹ್ಮದ್ ಬಾಂಬೆ (46) ಎಂದು ಗುರುತಿಸಲಾಗಿದೆ. ಪೂನಂ ಪಾಂಡೆ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾಗಿ ಜೋನ್ 1 ಡೆಪ್ಯುಟಿ ಪೊಲೀಸ್ ಕಮೀಷನರ್ ಸಂಗ್ರಾಮ್ ಸಿಂಗ್ ನಿಶಂದರ್ ತಿಳಿಸಿದ್ದಾರೆ.

ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ), 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), ರಾಷ್ಟ್ರೀಯ ವಿಪತ್ತು ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್ ಗಳ ಪ್ರಕಾರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೂನಂ ಪಾಂಡೆಗೆ ವಿವಾದಗಳೇನು ಹೊಸದಲ್ಲ. ಈ ಹಿಂದೆ ಸಾಕಷ್ಟು ಸಲ ತನ್ನ ಹಾಟ್ ಫೋಟೋಗಳಿಂದ ಹಾಗೂ ಬೋಲ್ಡ್ ಹೇಳಿಕೆಗಳಿಂದ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ತನ್ನ ನಟನೆಗಿಂತ ವಿವಾದಗಳಿಂದಲೇ ಅವರು ಹೆಸರು ಮಾಡಿದ್ದಾರೆ.

2011ರಲ್ಲಿ ಟೀಂ ಇಂಡಿಯಾ ಒನ್ ಡೇ ಕ್ರಿಕೆಟ್ ವಿಶ್ವಕಪ್ ಗೆದ್ದರೆ ನಗ್ನವಾಗಿ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಮೊದಲ ಸಲ ಎಲ್ಲರ ಗಮನಸೆಳೆದಿದ್ದರು. ಆ ಬಳಿಕವೂ ಸಾಕಷ್ಟು ಸಲ ವಿವಾದಾತ್ಮಕ ಹೇಳಿಕೆಗಳಿಂದ ಮಾಧ್ಯಮಗಳ ಗಮನಸೆಳೆದಿದ್ದರು. ನಶಾ, ಲವ್ ಈಸ್ ಪಾಯಿಸನ್, ಮಾಲಿನಿ ಅಂಡ್ ಕೋ, ಆಗಯಾ ಹೀರೋ, ದಿ ಜರ್ನಿ ಆಫ್ ಕರ್ಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಲ ಕಾಲದಿಂದ ಪೂನಂ ಹಾಗೂ ಸಾಮ್ ಅಹ್ಮದ್ ಡೇಟಿಂಗ್ ನಲ್ಲಿದ್ದಾರೆಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿವೆ.

Comments are closed.