ಮನೋರಂಜನೆ

ನಟಿ ರಶ್ಮಿಕಾ ಮಂದಣ್ಣಗೂ ಕಾಡುತ್ತಿರುವ ವೃತ್ತಿ ಜೀವನದ ಅಭದ್ರತೆ..!

Pinterest LinkedIn Tumblr


ರಶ್ಮಿಕಾ ಮಂದಣ್ಣ ಅತಿ ಹೆಚ್ಚು ಟ್ರೋಲ್​ ಆಗುವ ಕನ್ನಡದ ನಟಿ ಎಂದರೆ ತಪ್ಪಾಗದು. ಇದೇ ಕಾರಣಕ್ಕೆ ಆಗಾಗ ಟ್ರೋಲ್​ ಮಾಡುವವರಿಗೆ ಸರಿಯಾಗಿಯೇ ಕ್ಲಾಸ್​ ತೆಗೆದುಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಸಮಯ ಸಿಕ್ಕಾಗಲೆಲ್ಲ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಲ್ಲಿ ಪಾಠ ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೆ ರಶ್ಮಿಕಾ ತಮ್ಮ ಸಂಪೂರ್ಣ ಪ್ರೀತಿಯನ್ನು ಮುಗ್ಧ ಜೀವಿಗಳಿಗೆ ಅಂದರೆ ಸಾಕು ಪ್ರಾಣಿ-ಪಕ್ಷಿಗಳಿಗೆ ಕೊಡಿ ಎಂದು ಮನವಿ ಮಾಡಿದ್ದರು. ಈಗ ಜೀವನದಲ್ಲಿ ಎಲ್ಲರಿಗೂ ಕಾಡುವ ಅಭದ್ರತೆ ಬಗ್ಗೆ ಪಾಠ ಮಾಡುತ್ತಿದ್ದಾರೆ.

ಲಾಕ್​ಡೌನ್​ನಲ್ಲಿ ಸಾಕಷ್ಟು ಮಂದಿಗೆ ನಾನಾ ರೀತಿಯ ಅಭದ್ರತೆ ಕಾಡಿರುತ್ತದೆ. ಕೆಲವರು ಸಣ್ಣಗಾಗಿದ್ದು, ತೂಕ ಹೆಚ್ಚಾಗಿದ್ದು, ಕಪ್ಪಗಿರುವುದು ಹೀಗೆಲ್ಲ ಸಣ್ಣ ಸಣ್ಣ ವಿಷಯಗಳ ಬಗ್ಗೆ ಯೋಚನೆ ಮಾಡಲು ನಮ್ಮ ಸಮಯವನ್ನು ಕೊಟ್ಟಿದ್ದು ಎಷ್ಟು ಸರಿ..? ಈ ಲಾಕ್​ಡೌನ್​ನಲ್ಲಿ ನನಗೂ ನನ್ನ ಕೆಲಸದ ಬಗೆಗಿನ ಅಭದ್ರತೆ ಕಾಡಿತ್ತು ಎಂದು ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೆಲಸ ಮಾತ್ರವಲ್ಲ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆಯೂ ಅಭದ್ರತೆ ಕಾಡಿತ್ತಂತೆ. ಆದರೆ ಈ ಸಮಯದಲ್ಲಿ ಅವರಿಗೆ ಅರ್ಥವಾಗಿದ್ದು, ಎಲ್ಲವೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಯಾವುದನ್ನು ನಿಯಂತ್ರಿಸಬಹುದೋ ಅವುಗಳ ಬಗ್ಗೆ ಯೋಚಿಸೋಣ..! ನಮ್ಮ ಅಭದ್ರತೆಯನ್ನೇ ಶಕ್ತಿಯನ್ನಾಗಿ ಬದಲಾಯಿಸಿಕೊಳ್ಳೋಣ. ನಮ್ಮ ಬಗ್ಗೆ ನಮಗೆ ನಂಬಿಕೆ ಇರಬೇಕು. ನಾವು ಏನೆಂದು ನಮಗೆ ಮಾತ್ರ ಗೊತ್ತಿರುತ್ತದೆ ಎಂದು ಪಾಠ ಮಾಡಿದ್ದಾರೆ ಲಿಲ್ಲಿ.

Comments are closed.