ಪ್ರಚಲಿತ ಟಾಪಿಕ್ಸ್ ಬಗ್ಗೆ ಸಿನಿಮಾ ತೆಗೆಯುವುದರಲ್ಲಿ ರಾಮ್ ಗೋಪಾಲ್ ವರ್ಮಾರನ್ನು ಮೀರಿಸಿದವರು ಯಾರೂ ಇಲ್ಲ. ಇದೀಗ ವರ್ಮಾ ಕಣ್ಣು ಕೊರೊನಾ ವೈರಸ್ ಮೇಲೆ ಬಿದ್ದಿದೆ. ಈ ಬಗ್ಗೆ ಸಿನಿಮಾ ಮಾಡುತ್ತಿದ್ದು ಈಗ ಟ್ರೇಲರ್ ರಿಲೀಸ್ ಮಾಡಿದ್ದಾರೆ.
ಆರಂಭದಲ್ಲಿ ಹಾರರ್ ಸಿನಿಮಾಗಳನ್ನು ಹೆಚ್ಚಾಗಿ ತೆಗೆಯುತ್ತಿದ್ದ ವರ್ಮಾ ಬಳಿಕ ತಮ್ಮ ನೋಟವನ್ನು ಭೂಗತ ಜಗತ್ತಿನ ಸಿನಿಮಾಗಳ ಕಡೆಗೆ ಹರಿಸಿದರು. ಬರುಬರುತ್ತಾ ಟ್ರೆಂಡಿಂಗ್ ಟಾಪಿಕ್‌ಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳನ್ನು ತೆಗೆದರು. ಇದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ ವರ್ಮಾ.
ಇದೀಗ ಇಡೀ ಜಗತ್ತನ್ನು ನಡುಗಿಸುತ್ತಿರುವ ಕೊರೊನಾ ಮಹಾಮಾರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ‘ಕೊರೊನಾ ವೈರಸ್’ ಎಂದು ಹೆಸರಿಟ್ಟಿರುವ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಒಟ್ಟು ನಾಲ್ಕು ನಿಮಿಷಗಳ ಅವಧಿಯ ಈ ಟ್ರೇಲರ್ ನೋಡುತ್ತಿದ್ದರೆ ಎಂತಹವರಿಗೂ ಎದೆ ಝಲ್ ಅನ್ನುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ, “ನಮ್ಮ ಕೆಲಸವನ್ನು ಆ ದೇವರ ಜೊತೆಗೆ ಕೊರೊನಾ ಸಹ ತಡೆಯಲಿಲ್ಲ ಎಂದು ನಿರೂಪಿಸಿಕೊಳ್ಳೋಣ ಎಂದುಕೊಂಡೆವು. ಜಗತ್ತಿನಲ್ಲೇ ಕೊರೊನಾ ವೈರಸ್ ಬಗ್ಗೆ ತೆಗೆದ ಮೊದಲ ಸಿನಿಮಾ ಇದು. ನಮ್ಮ ಕಲಾವಿದರು, ತಂತ್ರಜ್ಞರು ತಮ್ಮ ಕ್ರಿಯೇಟಿವಿಟಿಯನ್ನು ನಿರೂಪಿಸಿಕೊಂಡಿದ್ದಾರೆ” ಎಂದಿದ್ದಾರೆ.
ಲಾಕ್‍ಡೌನ್‍ನಲ್ಲೂ ನಮ್ಮವರು ಲಾಕ್‍ಡೌನ್ ಆಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀಕಾಂತ್ ಅಯ್ಯಂಗಾರ್ ಸೇರಿದಂತೆ ಇನ್ನಿತರರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅಗಸ್ತ್ಯ ಮಂಜು ನಿರ್ದೇಶಿಸಿದ್ದರೆ, ಡಿಎಸ್ಸಾರ್ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಕೊರೊನಾ ವೈರಸ್ ಟ್ರೇಲರ್ ಯೂಟ್ಯೂಬ್‍ನಲ್ಲಿ ಟ್ರೆಂಡ್ ಆಗಿದೆ.
Comments are closed.