ಮನೋರಂಜನೆ

ಜನತೆಯ ಗಮನ ಸೆಳೆಯಲು ಸೌಂದರ್ಯದ ಮೇಲಿನ ಪರದೆ ಎತ್ತಲೇ ಬೇಕು: ಬಾಲಿವುಡ್ ನಟಿ ಊರ್ವಶಿ ರೌತೆಲಾ

Pinterest LinkedIn Tumblr


ಮುಂಬೈ: ಬಿ ಟೌನ್ ನಲ್ಲಿ ತನ್ನ ಹಾಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುವ ಊರ್ವಶಿ ರೌತೆಲಾ, ಒಂದಿಲ್ಲ ಒಂದು ಕಾರಣಕ್ಕೆ ಹೆಡ್ ಲೈನ್ ಸೃಷ್ಟಿಸುತ್ತಲೇ ಇರುತ್ತಾಳೆ. ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಹಸಿ-ಬಿಸಿ ಭಾವಚಿತ್ರಗಳನ್ನು ಹಂಚಿಕೊಂಡು ಸುದ್ದಿ ಮಾಡುವ ಈ ನಟಿ, ಕೆಲವು ಬಾರಿ ತನ್ನ ಹೇಳಿಕೆಗಳ ಮೂಲಕವೂ ಕೂಡ ಲೈಮ್ ಲೈಟ್ ನಲ್ಲಿ ಇರುತ್ತಲೇ. ಈ ಬಾರಿ ಮಿಸ್ ಯುನಿವರ್ಸ್ 2015ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ಖ್ಯಾತ ಬಾಲಿವುಡ್ ತಾರೆ ನೀಡಿರುವ ಹೇಳಿಕೆಯೊಂದು ಇದೀಗ ಭಾರಿ ವೈರಲ್ ಆಗಿದೆ. ಹೌದು, ಇತ್ತೀಚೆಗಷ್ಟೇ ಹೇಳಿಕೆಯೊಂದನ್ನು ನೀಡಿರುವ ಊರ್ವಶಿ ” ಪುರುಷ ನಟರಾಗಲಿ ಅಥವಾ ನಟಿಯರಾಗಿರಲಿ, ಯಾವಾಗಲು ಸುಂದರವಾಗಿ ಕಾಣುಲು ಒತ್ತಡದಲ್ಲಿರುತ್ತಾರೆ” ಎಂದು ಹೇಳಿದ್ದಾಳೆ.

ಈ ಕುರಿತು ಹೇಳಿಕೆ ನೀಡಿರುವ ಊರ್ವಶಿ, “ನೀವು ಓರ್ವ ನಟ-ನಟಿ ಅಥವಾ ಸ್ಟಾರ್ ಆಗಿರುವಿರಿ ಎಂದರೆ ಫಿಟ್ ಆಗಿರುವುದು ನಿಮ್ಮ ಅನಿವಾರ್ಯತೆ. ಬಾಲಿವುಡ್ ತಾರೆಯರು ಯಾವಾಗಲು ಸುಂದರವಾಗಿ ಕಾಣುವ ಒತ್ತಡದಲ್ಲಿರುತ್ತಾರೆ. ಕೇವಲ ಮಹಿಳಾ ತಾರೆಯರಿಗೆ ಮಾತ್ರ ಇದು ಸೀಮಿತವಾಗಿರದೇ ಪುರುಷ ನಟರಿಗೂ ಕೂಡ ಇದು ಅನ್ವಯಿಸುತ್ತದೆ” ಎಂದಿದ್ದಾಳೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2.63 ಕೋಟಿ ಹಾಗೂ ಟ್ವಿಟ್ಟರ್ ನಲ್ಲಿ 631.2 ಸಾವಿರ ಹಿಂಬಾಲಕರನ್ನು ಹೊಂದಿರುವ ಈ ನಟಿ, “ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲಿಂಗ್ ನಿಂದ ಬಚಾವಾಗುವ ಒತ್ತಡ ಇದಾಗಿರುತ್ತದೆ” ಎಂದು ಹೇಳಿದ್ದಾಳೆ.

ಊರ್ವಶಿಯ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಸದ್ಯ ಊರ್ವಶಿ ತನ್ನ ಮುಂಬರುವ ಚಿತ್ರ ‘ವರ್ಜಿನ್ ಭಾನುಪ್ರಿಯಾ’ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾಳೆ. ಈ ಚಿತ್ರ OTT ಪ್ಲಾಟ್ಫಾರ್ಮ್ ಮೇಲೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಗೌತಮ್ ಗುಲಾಟಿ, ಅರ್ಚನಾ ಪುರನ್ ಸಿಂಗ್, ಡೆಲ್ನಾಜ್ ಇರಾನಿ, ರಾಜೀವ್ ಗುಪ್ತಾ ಹಾಗೂ ಬೃಜೇಂದ್ರ ಕಾಲಾ, ನಿಕಿ ಅನೆಜಾ ವಾಲಿಯಾ ಹಾಗೂ ರುಮಾನಾ ಮಾಲಾ ಅಭಿನಯಿಸಿದ್ದಾರೆ.

Comments are closed.