ಮನೋರಂಜನೆ

ಚಿರು ಬಗ್ಗೆ ಭಾವನಾತ್ಮಕ ಪತ್ರ ಬರೆದ ಮೇಘನಾ ರಾಜ್

Pinterest LinkedIn Tumblr


ಚಿರಂಜೀವಿ ಸರ್ಜಾ ಮೃತಪಟ್ಟು ಎರಡು ವಾರವೇ ಕಳೆಯುತ್ತಾ ಬಂದಿದೆ. ಗಂಡನ ಸಾವಿನ ನಂತರ ನಟಿ ಮೇಘನಾ ರಾಜ್ ಮೌನ ತಾಳಿದ್ದರು​. ಚಿರು ಸರ್ಜಾ ಅಂತ್ಯ ಸಂಸ್ಕಾರದ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದರು ನಟಿ ಮೇಘನಾ ರಾಜ್​. ಈಗ ಅವರು ಚಿರು ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದು, ನನಗೆ ಹುಟ್ಟುತ್ತಿರುವ ಮಗು ನೀನು ನೀಡಿದ ಉಡುಗೊರೆ ಎಂದಿದ್ದಾರೆ. ಅವರ ಪತ್ರದ ಸಾರಾಂಶ ಇಲ್ಲಿದೆ.

“ಚಿರು ನಾನು ನಿನಗೆ ಏನನ್ನು ಹೇಳಬೇಕು ಎಂದುಕೊಂಡಿದ್ದೀನೋ ಅದನ್ನು ಶಬ್ದಗಳ ಮೂಲಕ ಹೇಳಲು ಸಾಧ್ಯವಾಗುತ್ತಿಲ್ಲ. ನೀನು ನನಗೆ ಏನು ಎಂಬುದನ್ನು ಶಬ್ದಗಳ ಮೂಲಕ ಹೇಳಲಲು ಸಾಧ್ಯವಿಲ್ಲ. ಗೆಳೆಯ, ಪ್ರಿಯಕರ, ಪಾರ್ಟ್ನರ್​, ಮಗು, ಆತ್ಮಸ್ಥೈರ್ಯ, ಗಂಡ- ಇವೆಲ್ಲಕ್ಕಿಂತಲೂ ಹೆಚ್ಚು ನೀನು. ನೀನು ನನ್ನ ಹೃದಯದ ಒಂದು ಭಾಗ,”

“ನನಗೆ ಮನೆಯ ಬಾಗಿಲನ್ನು ನೋಡಿದಾಗೆಲ್ಲ ಕರಳು ಹಿಂಡಿದಂತಾಗುತ್ತದೆ. ನಾನು ಮನೆಗೆ ಬಂದೆ ಎಂದು ನೀನು ಹೇಳುವುದಿಲ್ಲ ಎಂಬುದನ್ನು ನೆನೆದಾಗೆಲ್ಲ ಸಂಕಟ ಆಗುತ್ತದೆ. ಪ್ರತಿ ಕ್ಷಣ, ಪ್ರತಿ ದಿನ ನಿನ್ನನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೆನೆದರೆ ನಾನು ಮುಳುಗುತ್ತಿದ್ದೇನೆ ಎನ್ನುವ ಭಾವ ಕಾಡುತ್ತದೆ. ಆದರೆ, ಏಂಜೆಲ್​ ರೀತಿ ನೀನು ನನ್ನ ಸುತ್ತಲೂ ಇದ್ದೀಯಾ ಎನ್ನುವ ಭಾವನೆ ನನಗೆ ನಿಜಕ್ಕೂ ಖುಷಿ ನೀಡುತ್ತದೆ,”

ನೀನು ನನ್ನ ಅತಿಯಾಗಿ ಪ್ರೀತಿಸಿದ್ದೆ. ನನ್ನನ್ನು ನೀನು ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಈಗ ಹುಟ್ಟುತ್ತಿರುವ ಮಗು ನೀನು ನನಗೆ ನೀಡಿದ ಉಡುಗೊರೆ. ಅದು ನಮ್ಮ ಪ್ರೀತಿಯ ಸಂಕೇತ. ನನ್ನ ಮಗುವಾಗಿ ನಿನ್ನನ್ನು ಮತ್ತೆ ಭೂಮಿಗೆ ಕರೆತರು ನಾನು ಕಾತುರನಾಗಿದ್ದೇನೆ. ನಿನ್ನನ್ನು ಮತ್ತೆ ಬಿಗಿದಪ್ಪಲು ತುದಿಗಾಲಲ್ಲಿ ನಿಂತಿದ್ದೇನೆ. ನಿನ್ನ ನಗುವನ್ನು ಮತ್ತೊಮ್ಮೆ ನೋಡಬೇಕಿದೆ. ನಾನು ನಿನಗೋಸ್ಕರ ಕಾಯುತ್ತೇನೆ. ನನ್ನ ಉಸಿರಿರುವ ವರೆಗೆ ನೀನು ಬದುಕಿರುತ್ತೀಯಾ. ನೀನು ನನ್ನವನು. ಐ ಲವ್ ಯು, ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Comments are closed.