ಮನೋರಂಜನೆ

ನೇಪಾಳದ ಪರಿಷ್ಕೃತ ನಕ್ಷೆಯನ್ನು ಬೆಂಬಲಿಸಿದ್ದ ಬಾಲಿವುಡ್ ನಟಿ ಮನೀಶಾ ಕೊಯಿರಾಲಾರನ್ನು ನೆಟ್ಟಿಗರಿಂದ ತರಾಟೆ

Pinterest LinkedIn Tumblr

ನವದೆಹಲಿ: ನೇಪಾಳದ ಪರಿಷ್ಕೃತ ನಕ್ಷೆಯನ್ನು ಬೆಂಬಲಿಸಿದ್ದ ನೇಪಾಳ ಮೂಲದ ಬಾಲಿವುಡ್ ನಟಿ ಮನೀಶಾ ಕೊಯಿರಾಲಾರನ್ನು ನೆಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತದ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ನಮ್ಮದು ಎಂದು ನೇಪಾಳ ಪರಿಷ್ಕೃತ ನಕ್ಷೆಯನ್ನು ಸಂಸತ್ ಅನುಮೋದನೆ ಸಿಕ್ಕಿತ್ತು.

ಇದನ್ನು ಬೆಂಬಲಿಸಿ ಮನೀಶಾ ಕೊಯಿರಾಲಾ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ಟ್ವೀಟ್ ನಲ್ಲಿ ಚಿಕ್ಕ ರಾಷ್ಟ್ರದ ಗೌರವ ಮತ್ತು ಘನತೆ ಎತ್ತಿಹಿಡಿದಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

ಈ ಬಗ್ಗೆ ಮನೀಶಾ ಕೊಯಿರಾಲಾರನ್ನು ನೆಟಿಗರು ತರಾಟೆಗೆ ತೆಗೆದುಕೊಂಡಿದ್ದು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

Comments are closed.