ಮನೋರಂಜನೆ

ಒಂದೇ ತಿಂಗಳಲ್ಲಿ 50 ಸಿಮ್‌ ಕಾರ್ಡ್‌ ಬದಲಿಸಿದ್ದ ಬಾಲಿವುಡ್ ನಟ ಸುಶಾಂತ್‌ ಸಿಂಗ್‌!

Pinterest LinkedIn Tumblr


ನೇಣಿಗೆ ಶರಣಾಗುವ ಮೂಲಕ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್‌ ನೀಡಿದರು ನಟ ಸುಶಾಂತ್‌ ಸಿಂಗ್‌ ರಜಪೂತ್‌. ಆ ದುರ್ಘಟನೆ ನಡೆದು ಎರಡು ವಾರ ಕಳೆದಿದೆ. ಕೆಲವೇ ದಿನಗಳ ಹಿಂದೆ ಮರಣೋತ್ತರ ಪರೀಕ್ಷೆಯ ವರದಿ ಕೂಡ ಬಂದಿದ್ದು, ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂಬುದನ್ನೂ ಕೂಡ ಪೊಲೀಸರು ಹೇಳಿದ್ದಾರೆ. ಹಾಗಿದ್ದರೂ ಅನುಮಾನದ ಕಾರ್ಮೋಡ ಇನ್ನೂ ಸರಿದಿಲ್ಲ.

ಹಿಂದಿ ಚಿತ್ರರಂಗದ ಖ್ಯಾತ ನಟ ಶೇಖರ್‌ ಸುಮನ್‌ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ #JusticeForSushantForum ಎಂಬ ಆಂದೋಲನ ಶುರುಮಾಡಿದ್ದಾರೆ. ಪಾಟ್ನಾದಲ್ಲಿರುವ ಸುಶಾಂತ್‌ರ ತಂದೆಯನ್ನು ಶೇಖರ್‌ ಸುಮನ್‌ ಭೇಟಿ ಮಾಡಿ ಬಂದಿದ್ದಾರೆ. ಎಲ್ಲ ಬೆಳವಣಿಗೆಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಸುಶಾಂತ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶೇಖರ್‌ ಸುಮನ್‌ ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೇಖರ್‌ ಸುಮನ್‌ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಈ ಪ್ರಕರಣದಲ್ಲಿ ಅನೇಕ ಮಿಸ್ಸಿಂಗ್‌ ಲಿಂಕ್‌ಗಳಿವೆ. ಸೂಸೈಡ್‌ ನೋಟ್‌ ಯಾಕೆ ಇರಲಿಲ್ಲ? ಒಂದೇ ತಿಂಗಳಲ್ಲಿ ಸುಶಾಂತ್‌ ಬರೋಬ್ಬರಿ 50 ಸಿಮ್‌ ಕಾರ್ಡ್‌ಗಳನ್ನು ಯಾಕೆ ಬದಲಾಯಿಸಿದ್ದರು? ಯಾರಿಂದಲಾದರೂ ತಪ್ಪಿಸಿಕೊಳ್ಳಬೇಕು ಎಂಬ ಸಂದರ್ಭದಲ್ಲಿ ಮಾತ್ರ ಈ ರೀತಿ ಮಾಡುತ್ತಾರೆ ಅಥವಾ ಸುಶಾಂತ್‌ಗೆ ಯಾರಿಂದಲೋ ಬೆದರಿಕೆ ಕರೆಗಳು ಬರುತ್ತಿದ್ದಿರಬಹುದು’ ಎಂದು ಶೇಖರ್‌ ಸುಮನ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತ, ಆಟವಾಡುತ್ತ ಇದ್ದ ಸುಶಾಂತ್‌ ಮರುದಿನ ಇದ್ದಕ್ಕಿದ್ದಂತೆಯೇ ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತಾರೆ? ಆ ಸಂದರ್ಭದಲ್ಲಿ ಸಿಸಿಟಿವಿ ಕೂಡ ಕೆಲಸ ಮಾಡುತ್ತಿರಲಿಲ್ಲ. ಸುಶಾಂತ್‌ 6 ಅಡಿ ಎತ್ತರ ಇದ್ದರು. ಸೀಲಿಂಗ್‌ ಕೂಡ ಹೆಚ್ಚು ಹೈಟ್‌ ಇರಲಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ಅನುಮಾನ ಖಂಡಿತಾ ಮೂಡುತ್ತದೆ ಎಂದು ಶೇಖರ್‌ ಸುಮನ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Comments are closed.