ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎರಡು ವಾರಗಳೇ ಕಳೆದಿವೆ. ಅವರ ಆತ್ಮಹತ್ಯೆಗೆ ಬಾಲಿವುಡ್ ದಿಗ್ಗಜರು ನೇರ ಕಾರಣ ಎಂದು ಕೆಲವರು ದೂರಿದ್ದರು. ಇನ್ನೂ ಕೆಲವರು ಇದು ಕೊಲೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ತನಿಖೆಗೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ!
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ಎರಡು ಮೂರು ದಿನಗಳ ಕಾಲ ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯನ್ನು ಪ್ರಶ್ನೆ ಮಾಡಲಿದ್ದಾರೆ. ಈಗಾಗಲೇ ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್ ಕೂಡ ಕಳುಹಿಸಲಾಗಿದೆಯಂತೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಸುಶಾಂತ್ ಸಿಂಗ್ಗೆ ಸಿಕ್ಕ ಸಿನಿಮಾ ಕೈ ತಪ್ಪಲು ಸಂಜಯ್ ಲೀಲಾ ಬನ್ಸಾಲಿ ಕೂಡ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಾಲಿವುಡ್ನ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಯಶ್ ರಾಜ್ ಫಿಲ್ಮ್ಸ್ನ ಕಾಸ್ಟಿಂಗ್ ನಿರ್ದೇಶಕ ಶಾನೂ ಶರ್ಮಾರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗ ಅವರನ್ನು ಮತ್ತೊಮ್ಮೆ ವಿಚಾರಣೆ ಮಾಡಲಾಗುತ್ತಿದೆ.
ಮುಂಬೈ ಪೊಲೀಸರ ಎದುರು ಕಂಗನಾ ರಣಾವತ್ ಮತ್ತು ಶೇಖರ್ ಕಪೂರ್ ಕೂಡ ಶೀಘ್ರವೇ ತಮ್ಮ ಹೇಳಿಕೆಯನ್ನು ದಾಖಲು ಮಾಡಲಿದ್ದಾರೆ. ರಜಪೂತ್ ಸಾವಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಸುಶಾಂತ್ ಸಾವಿಗೆ ಇವರು ಬೇಸರ ವ್ಯಕ್ತಪಡಿಸಿದ್ದರು.
Comments are closed.