ಸದ್ಯ ಬಾಲಿವುಡ್ನಲ್ಲಿ ಮೈಚಳಿ ಬಿಟ್ಟು ಮೈ ಬಳುಕಿಸುತ್ತಿರುವ ನಟಿ ನೋರಾ ಫತೇಹಿಗೆ ಎಲ್ಲಿಲ್ಲದ ಬೇಡಿಕೆ. ನಟಿ ಚಿತ್ರದಲ್ಲಿ ಸೊಂಟ ಬಳುಕಿಸಿದ್ರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎಂಬ ಮಾತುಗಳು ಬಿಟೌನ್ನಲ್ಲಿದೆ. ಹೀಗಾಗಿಯೇ ಇತ್ತೀಚಿನ ಎಲ್ಲಾ ಚಿತ್ರಗಳ ಐಟಂ ಡ್ಯಾನ್ಸ್ನಲ್ಲಿ ನೋರಾ ಹೆಜ್ಜೆ ಹಾಕುತ್ತಿದ್ದಾರೆ.
ಇದರ ನಡುವೆ ನೋರಾ ದಿನ ಕಳೆದಂತೆ ಅಭಿಮಾನಿ ಬಳಗವನ್ನೂ ಕೂಡ ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ಅವರ ಇನ್ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಈ ಖುಷಿಯನ್ನು ವಿಭಿನ್ನವಾಗಿ ಆಚರಿಸಿದ ನೋರಾ ತಮ್ಮ ಖ್ಯಾತಿಗೆ ಮೈಲೇಜ್ ತಂದುಕೊಟ್ಟ ವಿಡಿಯೋವೊಂದನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕೆನಡಾ ಮೂಲದ ನೋರಾ ಫತೇಹಿ, 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಲ್ಲಿ ನೃತ್ಯ ಪ್ರದರ್ಶಿಸಿದ್ದರು. ಈ ಹಾಡು ವೈರಲ್ ಆಗಿದ್ದಲ್ಲದೇ ಅವಕಾಶಗಳು ಅರಸಿ ಬಂದಿದ್ದವು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ನಟಿ, ಇದೀಗ ಬಾಲಿವುಡ್ನ ನಂಬರ್ 1 ಐಟಂ ಡ್ಯಾನ್ಸರ್ ಆಗುವತ್ತ ಹೊರಟಿದ್ದಾರೆ.
ನೋರಾ ಸೊಂಟ ಬಳುಕಿಸಿದ ಸತ್ಯಮೇವ ಜಯತೇ ಸಿನಿಮಾದ ದಿಲ್ಬರ್, ‘ಕಮರಿಯಾ’, ‘ಸಾಕಿ ಸಾಕಿ’, ‘ಏಕ್ ಟು ಕೇಮ್ ಜಿಂದಗಾನಿ’ ಮತ್ತು ‘ಸಮ್ಮರ್ ಸಾಂಗ್’ ಹಾಡುಗಳು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿವೆ. ಒಟ್ಟಾರೆಯಾಗಿ 10ಕ್ಕೂ ಅಧಿಕ ಹಾಡುಗಳಿಗೆ ಹೆಜ್ಜೆ ಹಾಕಿರುವ ನೋರಾ ಸದ್ಯದ ಬಹುಬೇಡಿಕೆಯ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
Comments are closed.