ಬೆಂಗಳೂರು: ಖ್ಯಾತ ಕಿರುತೆರೆ ನಟ, ಅಂತಃಪುರ ಧಾರಾವಾಹಿ ಖ್ಯಾತಿಯ ನಟ ಸುಶೀಲ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮಂಡ್ಯದ ಮನೆಯಲ್ಲಿ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಜಯ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸಲಗದಲ್ಲಿ ಸುಶೀಲ್ ಗೌಡ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದಾರೆ.
ಇನ್ನು ಮಂಡ್ಯ ಮೂಲದ ಸುಶೀಲ್, ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ಇದೀಗ ಅವರ ಸಾವಿಗೆ ಧಾರಾವಾಹಿ ಬಳಗ ಕಂಬನಿ ಮಿಡಿದಿದೆ. ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುಶೀಲ್, ಕಿರುತೆರೆ ಜತೆಗೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದರು. ಅದರಂತೆ, ದುನಿಯಾ ವಿಜಯ್ ನಾಯಕತ್ವ ಮತ್ತು ನಿರ್ದೇಶನದ ‘ಸಲಗ’ ಚಿತ್ರದಲ್ಲಿಯೂ ಪೊಲೀಸ್ ಪಾತ್ರ ನಿಭಾಯಿಸಿದ್ದರು.
Comments are closed.