ಹಾಲಿವುಡ್ ನಟಿ ನಯಾ ರಿವೇರಾ ಕಾಣೆಯಾಗಿದ್ದು, ಅವರು ಮೃತಪಟ್ಟಿರಬದೆಂದು ಶಂಕಿಸಲಾಗಿದೆ. ಸಾಕಷ್ಟು ಹಾಲಿವುಡ್ ಚಿತ್ರಗಳಲ್ಲಿ ಅವರು ನಟಿಸಿದ್ದು, ಗ್ಲೀ ಮ್ಯಸಿಕಲ್ ಸಿರೀಸ್ ಮೂಲಕ ಅವರು ಹೆಚ್ಚು ಖ್ಯಾತಿ ಪಡೆದಿದ್ದರು.
ಕ್ಯಾಲಿಫೋರ್ನಿಯಾದ ಲೇಕ್ ಪಿರು ಜಲಾಯಶದಲ್ಲಿ ನಾಲ್ಕು ವರ್ಷದ ಮಗು ಜೋಸೆ ಜತೆ ನಯಾ ತೆರಳಿದ್ದರು. ಸದ್ಯ, ಬೋಟ್ನಲ್ಲಿ ಜೋಸ್ ಮಾತ್ರ ಪತ್ತೆ ಆಗಿದ್ದು, ನಯಾ ಕಾಣುತ್ತಿಲ್ಲ. ಜಲಾಯಶದಲ್ಲಿ ಮುಳುಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ನಯಾ ಬೋಟ್ ಒಂದನ್ನು ಬಾಡಿಗೆ ಪಡೆದು ಜಲಾಯಶದಲ್ಲಿ ಸಾಗಿದ್ದರು. ಆದರೆ, ಸರಿಯಾದ ಸಮಯಕ್ಕೆ ಬೋಟ್ ಹಿಂದುರುಗಿಲ್ಲ. ಹೀಗಾಗಿ ಅನುಮಾನಗೊಂಡ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜಲಾಯಶದ ಮಧ್ಯೆ ಬೋಟ್ ನಿಂತಿತ್ತು. ಈ ವೇಳೆ ಮಗು ಒಂಟಿಯಾಗಿತ್ತು. ಸದ್ಯ, ಅಗ್ನಿಶಾಮಕ ದಳದ ಸಿಬ್ಬಂದಿ ನಯಾಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ನಯಾ ನೀರಿನಲ್ಲಿ ಈಜುತ್ತಿದ್ದರಂತೆ. ಈ ವೇಳೆ ಅವರು ಮುಳುಗಿರುವ ಸಾಧ್ಯತೆ ಇದೆ. ಹೀಗಾಗಿ, ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಜುಲೈ 7ರಂದು ನಯಾ ಮಗುವಿನ ಜೊತೆ ಫೋಟೋ ಹಾಕಿದ್ದರು. ನಾವು ಇಬ್ಬರು ಮಾತ್ರ ಎನ್ನುವ ಕ್ಯಾಪ್ಶನ್ ಕೂಡ ನೀಡಲಾಗಿತ್ತು.
Comments are closed.