ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಇವರಿಬ್ಬರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇದೀಗ ಅದರ ಬೆನ್ನಲ್ಲೇ ಬಾಲಿವುಡ್ನ ಮತ್ತೊಬ್ಬ ನಟ ಅನುಪಮ್ ಖೇರ್ ಅವರ ಕುಟುಂಬಕ್ಕೂ ಕೊರೋನಾ ಕಂಟಕವನ್ನು ತಂದೊಡ್ಡಿದೆ. ಕುಟುಂಬದ ನಾಲ್ಕು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಕುರಿತು ಅನುಪಮ್ ಖೇರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಧ್ಯ ನಟನ ತಾಯಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಲ್ಲದೆ ಖೇರ್ ಅವರ ಸಹೋದರ, ರಾಜು ಖೇರ್, ಅವರ ಅತ್ತಿಗೆ ಮತ್ತು ಸೋದರ ಸೊಸೆ ಸಹ ಕೊರೋನಾ ಸೋಂಕಿಗೆ ತುತ್ತಾಗಿದ್ದು ನಟ ಖೇರ್ ಅವರಿಗೆ ಮಾತ್ರ ಕೊರೋನಾ ನೆಗೆಟಿವ್ ವರದಿ ಬಂದಿದೆ.
“ನನ್ನ ತಾಯಿ ದುಲಾರಿ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ನಾವು ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಸಹೋದರ, ಭಭಿ ಮತ್ತು ಸೋದರ ಸೊಸೆ ಸಹ ಕೋವಿಡ್ ಗೆ ಪಾಸಿಟಿವಿ ವರದಿ ಪಡೆದಿದ್ದಾರೆ. ನಾನೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ನನಗೆ ಸೋಂಕು ತಗುಲಿಲ್ಲ. ” ಖೇರ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಏತನ್ಮಧ್ಯೆ, ಶನಿವಾರ, ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊಣಾವೈರಸ್ ತಗುಲಿರುವ ವರದಿಯಾಗಿದೆ. ತಂದೆ ಮತ್ತು ಮಗಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ.
Comments are closed.