ಮನೋರಂಜನೆ

ಚಲನಚಿತ್ರ, ಧಾರಾವಾಹಿಗಳಲ್ಲಿ ನಟಿಸಿದ್ದ ನಟ ರಂಜನ್ ಇನ್ನಿಲ್ಲ!

Pinterest LinkedIn Tumblr


ನಟ ರಂಜನ್ ಅವರು ಜುಲೈ 11ರಂದು ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಇವರು ಬಳಲುತ್ತಿದ್ದರು. ಪಂಜಾಬಿನ ಚಂಡೀಗರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಲವು ದಿನಗಳಿಂದ ಕಾಯಿಲೆಯಿಂದ ರಂಜನ್ ಅವರು ಬಳಲುತ್ತಿದ್ದರು. ‘Gustakh Dil’, ‘Tum Dena Saath Mera’, ‘Sabki Ladli Bebo’, ‘Kuldeepa’k, ‘Bhawar’ ಮುಂತಾದ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ.
ಸಿನಿಮಾ ಮತ್ತು ಟಿವಿ ಕಲಾವಿದರ ಅಸೋಸಿಯೇಶನ್ (CINTAA) ರಂಜನ್ ಸಾವಿಗೆ ಸಂತಾಪ ಸೂಚಿಸಿದೆ. 2010ರಿಂದ ರಂಜನ್ ಅವರು ಈ ಕಮಿಟಿಯ ಸದಸ್ಯರಾಗಿದ್ದರು.

2014ರಲ್ಲಿ ಕಾಸ್ಟ್ಯೂಮ್ ಡಿಸೈನರ್ ನಿವ್ಯಾ ಛಬ್ರಾ ಜೊತೆ ವೈಹಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯಾ ರೈ ಬಚ್ಚನ್, ರಣದೀಪ್ ಹೂಡಾ ನಟನೆಯ ‘ಸರ್ಬ್ಜಿತ್’ ಸಿನಿಮಾದಲ್ಲಿ ರಂಜನ್ ಅವರು ನಟಿಸಿದ್ದರು. ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾದಲ್ಲಿಯೂ ರಂಜನ್ ಅಭಿನಯಿಸಿದ್ದರು.

ಅನೇಕ ಪಂಜಾಬಿ ಸಿನಿಮಾಗಳಲ್ಲಿ ರಂಜನ್ ನಟಿಸಿದ್ದಾರೆ. ‘ಕ್ರೈಮ್ ಪೆಟ್ರೋಲ್’ ಖ್ಯಾತಿಯ ಇನ್ನೋರ್ವ ನಟ ಸಾಫಿಕ್ ಅನ್ಸಾರಿ ಅವರು ಲಂಗ್ ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

Comments are closed.