ಮನೋರಂಜನೆ

ಬಾಲಿವುಡ್ ನಟ ಅನುಪಮ್​ ಖೇರ್​ ತಾಯಿ, ಕುಟುಂಬ ಸದಸ್ಯರಿಗೆ ಕೊರೋನಾ ಪಾಸಿಟಿವ್​!

Pinterest LinkedIn Tumblr


ಬಾಲಿವುಡ್​ ಬಿಗ್ ಬಿ ಅಮಿತಾಭ್​ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರಿಗೆ ಕೊರೋನಾ ಪಾಸಿಟಿವ್​ ಬಂದಿದೆ. ಹೀಗಾಗಿ ಇವರಿಬ್ಬರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇದೀಗ ಅದರ ಬೆನ್ನಲ್ಲೇ ಬಾಲಿವುಡ್​ನ ಮತ್ತೊಬ್ಬ ನಟ ಅನುಪಮ್​ ಖೇರ್​ ಅವರ ಕುಟುಂಬಕ್ಕೂ ಕೊರೋನಾ ಕಂಟಕವನ್ನು ತಂದೊಡ್ಡಿದೆ. ಕುಟುಂಬದ ನಾಲ್ಕು ಜನರಿಗೆ ಕೊರೋನಾ ಪಾಸಿಟಿವ್​ ಬಂದಿದೆ.

ಅನುಪಮ್​ ಖೇರ್​ ಅವರ ತಾಯಿ ದುಲಾರಿ, ಸಹೋದರ ರಾಜು, ಅತ್ತಿಗೆ ರಿಮಾ ಮತ್ತು ಸೋದರ ಸೊಸೆ ವೃಂದಾರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದ್ದೆ. ಹೀಗಾಗಿ ಈ ವಿಚಾರವನ್ನು ಅನುಪಮ್​ ಖೇರ್ ತಮ್ಮ ಟ್ಟಿಟ್ವರ್​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.​ ವಿಡಿಯೋ ಮಾಡುವ ಮೂಲಕ ಅನುಪಮಾ ಖೇರ್​ ನನ್ನ ಕೋವಿಡ್​ -19 ವರದಿ ನೆಗೆಟಿವ್​ ಬಂದಿದೆ ಎಂದಿದ್ದಾರೆ.

ತಾಯಿ ದುಲಾರಿ ಅವರು ಅನಾರೋಗ್ಯ ಮತ್ತು ಹಸಿವಿಲ್ಲದೆ ಬಳಲುತ್ತಿದ್ದರು. ಹಾಗಾಗಿ ಅವರನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಲಾಗಿತ್ತು. ವರದಿ ಬಂದ ನಂತರ ಕೊವೀಡ್​ ಇದೆ ಎಂಬುದು ಧೃಢಪಟ್ಟಿದೆ. ಹಾಗಾಗಿ ಅವರನ್ನು ಮುಂಬೈನ ಕೋಕಿಲಾಬ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಕುಟುಂಬದವರು ಮನೆಯಲ್ಲಿಯೇ ಕ್ವಾರೆಂಟೈನ್​ ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಂತರ ವಿಡಿಯೋದಲ್ಲಿ ಅನುಪಮ್​ ಖೇರ್​​ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಸಹೋದರನ ಮನೆಗೆ ಸ್ಯಾನಿಟೈಸ್​ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

Comments are closed.