ಮನೋರಂಜನೆ

ನಟ ಹುಲಿವಾನ ಗಂಗಾಧರ್‌ ಕೊರೊನಾದಿಂದ ನಿಧನ!

Pinterest LinkedIn Tumblr


100ಕ್ಕೂ ಅಧಿಕ ಸಿನಿಮಾ, 150ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಹುಲಿವಾನ ಗಂಗಾಧರ್‌ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ಕೋವಿಡ್‌-19 ಸೋಂಕಿಗೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನಷ್ಟೇ ಅಲ್ಲದೆ, ತೆಂಗು ಬೆಳೆಗಾರರೂ ಆಗಿದ್ದ ಗಂಗಾಧರ್‌ ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕಿರುತೆರೆಯಲ್ಲೂ ಗಂಗಾಧರ್‌ ಸಕ್ರಿಯರಾಗಿದ್ದರು. ಇತ್ತೀಚೆಗೆ ಅವರು ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಎರಡು ದಿನ ಶೂಟಿಂಗ್‌ನಲ್ಲಿ ಪಾಲ್ಗೊಂಡ ನಂತರ ಅವರಿಗೆ ಜ್ವರ ಬಂತು. ಕೂಡಲೇ ಅವರು ಫಾರ್ಮ್‌ಹೌಸ್‌ನಲ್ಲಿ ಸೆಲ್ಫ್‌ ಕ್ವಾರಂಟೈನ್‌ ಆಗಿದ್ದರು. ಪಾಸಿಟಿವ್‌ ವರದಿ ಬಂದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಜ್ವರ ಕಾಣಿಸಿಕೊಂಡ ಬಳಿಕ ಕುಟುಂಬದವರಿಂದ ದೂರ ಉಳಿದು, ಸೆಲ್ಫ್‌ ಕ್ವಾರಂಟೈನ್‌ ಆಗಿದ್ದರಿಂದ ಗಂಗಾಧರ್‌ ಮನೆಯವರಿಗೆ ಸೋಂಕು ತಗುಲಿಲ್ಲ ಎನ್ನಲಾಗಿದೆ. ‘ಕ್ವಾರಂಟೈನ್ ಆದ ಬಳಿಕ ಅಪ್ಪ ಮೊಬೈಲ್‌ ಆಫ್‌ ಮಾಡಿಕೊಂಡಿದ್ದರು. ಹಾಗಾಗಿ ಧಾರಾವಾಹಿ ತಂಡದವರೂ ನಮ್ಮನ್ನು ಸಂಪರ್ಕ ಮಾಡಿಲ್ಲ’ ಎಂದಿದ್ದಾರೆ ಗಂಗಾಧರ್‌ ಪುತ್ರಿ ರೇವತಿ.

Comments are closed.