ಮನೋರಂಜನೆ

ಕೆಸರಿನ ಹೊಲದಲ್ಲಿ ಟ್ರಾಕ್ಟರ್ ಚಲಾಯಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್!

Pinterest LinkedIn Tumblr


ಮುಂಬೈ: ಇತ್ತೀಚಿಗೆ ಮೈ ತುಂಬ ಮಣ್ಣು ಮೆತ್ತಿಕೊಂಡು ಕೆಸರು ಗದ್ದೆಯಲ್ಲಿ ಕುಳಿತು ರೈತನಂತೆ ಪೋಸ್ ನೀಡಿ ಗೇಲಿಗೊಳಗಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಮತ್ತೊಂದು ವಿಡಿಯೋವೊಂದನ್ನು ಟ್ವಿಟರ್ ಖಾತೆಯಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ.

ಕೆಸರು ಗದ್ದೆಯಲ್ಲಿ ಟ್ರಾಕ್ಟರ್ ಚಲಾಯಿಸುವ ವಿಡಿಯೋ ಇದಾಗಿದ್ದು, ಫಾರ್ಮಿಂಗ್ ಎಂದು ಬರೆದುಕೊಂಡಿದ್ದಾರೆ. ಟ್ರಾಕ್ಟರ್ ನಿಂದ ಗದ್ದೆಯನ್ನು ಉಳುವುದು, ಕೃಷಿ ಗದ್ದೆಯಲ್ಲಿ ಓಡಾಡುವ ಮೂಲಕ ನನಗೂ ಕೃಷಿಯಲ್ಲಿ ಅನುಭವಿದೆ ಎಂದು ಹೇಳುವ ಮೂಲಕ ಗೇಲಿ ಮಾಡಿದ್ದವರಿಗೆ ತಿರುಗೇಟು ನೀಡಿದ್ದಾರೆ.

ಕೊರೋನಾವೈರಸ್ ಲಾಕ್ ಡೌನ್ ನ ಆರಂಭದಿಂದಲೂ ತಮ್ಮದೇ ಫಾರ್ಮ್ ಹೌಸ್ ನಲ್ಲಿ ಕಾಲದೂಡುತ್ತಿರುವ ಸಲ್ಮಾನ್ ಖಾನ್, ಅಲ್ಲಿಂದಲೇ ಪೋಟೋ,ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

Comments are closed.