ಟಾಲಿವುಡ್‌ನಲ್ಲಿ ನಟಿ ಶ್ರೀ ರೆಡ್ಡಿ ವಿವಾದಗಳಿಂದಲೇ ಫೇಮಸ್ ಆದವರು. ಯಾರಿಗೂ, ಯಾವುದಕ್ಕೂ ಮುಲಾಜು ನೋಡದ ನಟಿ ಅವರು. ಎರಡು ವರ್ಷಗಳ ಹಿಂದೆ ತಮ್ಮ ಹೇಳಿಕೆ ಹಾಗೂ ಪ್ರತಿಭಟನೆಗಳಿಂದಲೇ ತೆಲುಗು ಚಿತ್ರರಂಗವನ್ನು ಬೆಚ್ಚಿ ಬೀಳುವಂತೆ ಮಾಡಿದ್ದರು. ಆಗಾಗ ಏನಾದಾರೊಂದು ವಿಚಾರಗಳನ್ನು ಇಟ್ಟುಕೊಂಡು ಕಾಂಟ್ರವರ್ಸಿ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಮತ್ತೊಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ‘ದುಡ್ಡಿಗಾಗಿ ನನ್ನ ಆತ್ಮೀಯರ ಗೌರವಕ್ಕೆ ಧಕ್ಕೆ ತರುವುದಿಲ್ಲ’ ಎಂದಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಹೇಳಿಕೆಯನ್ನು ನೀಡಲು ಕಾರಣವೇನು? ಅದಕ್ಕೆ ಇಲ್ಲಿದೆ ಉತ್ತರ!
ಈಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಪವರ್ ಸ್ಟಾರ್’ ಸಿನಿಮಾ ಮಾಡಿ, ಅದರ ಟ್ರೇಲರ್ ಕೂಡ ರಿಲೀಸ್ ಮಾಡಿದ್ದಾರೆ. ವೈಯಕ್ತಿಕವಾಗಿ ನಟ ಪವನ್ ಕಲ್ಯಾಣ್‌ರನ್ನು ಟಾರ್ಗೆಟ್ ಮಾಡಿ ಈ ಸಿನಿಮಾ ಮಾಡಲಾಗಿದೆ ಎಂಬುದು ಎಂಥವರಿಗಾದರೂ ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಈ ಟ್ರೇಲರ್ ನೋಡಿದ ಮೇಲೆ ಅನೇಕರು ಆರ್‌ಜಿವಿ ವಿರುದ್ಧ ಕೋಪಗೊಂಡಿದ್ದಾರೆ. ಈ ಮಧ್ಯೆ ಆರ್‌ಜಿವಿ ಕುರಿತೂ ಒಂದು ಸಿನಿಮಾವಾಗುತ್ತಿದೆ. ಅದನ್ನು ಮಾಡುತ್ತಿರುವುದು ‘ಬಿಗ್ ಬಾಸ್’ ತೆಲುಗು ಸೀಸನ್ 2ರ ಮಾಜಿ ಸ್ಪರ್ಧಿ ಡಾ. ನೂತನ್ ನಾಯ್ಡು. ಚಿತ್ರದ ಶೀರ್ಷಿಕೆ ‘ಪರನ್ನಾ ಜೀವಿ’!
ವಿಶೇಷವೆಂದರೆ, ಶಕಲಕ ಶಂಕರ್ ಈ ಚಿತ್ರದಲ್ಲಿ ಆರ್‌ಜಿವಿ ಪಾತ್ರವನ್ನು ಮಾಡಲಿದ್ದಾರೆ. ಚಿತ್ರತಂಡ ಎಲ್ಲಿಯೂ ಇದು ವರ್ಮಾ ಕುರಿತ ಚಿತ್ರವೆಂದು ಹೇಳಿಲ್ಲವಾದರೂ, ಪೋಸ್ಟರ್ ಮತ್ತು ಟೈಟಲ್ ಡಿಸೈನ್ ಅದನ್ನೇ ಒತ್ತಿ ಒತ್ತಿ ಹೇಳುತ್ತಿವೆ. ಇದಕ್ಕೂ ನಟಿ ಶ್ರೀ ರೆಡ್ಡಿಗೂ ಏನು ಸಂಬಂಧ ಅಂತೀರಾ? ವಿಷಯ ಇದೆ. ಅದೇನು ಅನ್ನೋದನ್ನು ಶ್ರೀ ರೆಡ್ಡಿ ಬಾಯಿ ಬಿಟ್ಟಿದ್ದಾರೆ. ‘ಪರನ್ನಾ ಜೀವಿ’ ಚಿತ್ರದಲ್ಲಿ ಒಂದು ಪಾತ್ರ ಮಾಡುವಂತೆ ಅವರಿಗೆ ಆಫರ್ ನೀಡಲಾಗಿತ್ತಂತೆ! ಈ ಕುರಿತು ಶ್ರೀ ರೆಡ್ಡಿ, ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ!
‘ನನಗೆ ‘ಪರನ್ನಾ ಜೀವಿ ‘ ಚಿತ್ರದಲ್ಲಿ ನಟಿಸುಂತೆ ಸಾಕಷ್ಟು ಒತ್ತಡ ಹೇರಲಾಯಿತು. ಆದರೆ, ಈ ವಿವಾದಾತ್ಮಕ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದೆ. ಯಾಕೆಂದರೆ, ನಾನು ಆರ್‌ಜಿವಿ ಅವರನ್ನು ಪ್ರೀತಿಸುತ್ತೇನೆ. ನನಗೆ ದುಡ್ಡು ಒಂದೇ ಮುಖ್ಯವಾದರೆ, ಅದನ್ನು ಪಡೆಯಲು ನನಗೆ ಬೇಕಾದಷ್ಟು ದಾರಿಗಳಿವೆ. ಆದರೆ, ನನಗೆ ನನ್ನದೇ ಆದ ಕೆಲವು ಎಥಿಕ್ಸ್ ಇದೆ. ನನ್ನ ಆತ್ಮೀಯರ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ನಾನು ಮಾಡುವುದಿಲ್ಲ. ಅವರು ನನ್ನನ್ನು ಇಷ್ಟಪಡಲಿ ಅಥವಾ ಇಷ್ಟಪಡದೇ ಇರಲಿ, ಅದು ಮುಖ್ಯವಲ್ಲ. ‘
ಪವರ್ ಸ್ಟಾರ್’ ಚಿತ್ರದ ಹಾಡು ನನಗೆ ಬಹಳ ಇಷ್ಟವಾಯಿತು. ಅದಕ್ಕೆ ರಾಮ್ ಗೋಪಾಲ್ ವರ್ಮಾ ನಿಮಗೆ ಶುಭಾಶಯಗಳು’ ಎಂದಿದ್ದಾರೆ ಶ್ರೀ ರೆಡ್ಡಿ!
Comments are closed.