ಮನೋರಂಜನೆ

ಇತಿಹಾಸ ಸೃಷ್ಟಿಸಿದ ಸುಶಾಂತ್ ಸಿಂಗ್​ ಅಭಿನಯದ ದಿಲ್​ ಬೆಚಾರ

Pinterest LinkedIn Tumblr


ದಿಲ್​ ಬೆಚಾರ…. ಸುಶಾಂತ್ ಸಿಂಗ್​ ಅಭಿನಯದ ಕೊನೆಯ ಸಿನಿಮಾ. ನಿನ್ನೆ ಅಂದರೆ ಜುಲೈ 24ರಂದು ಸಂಜೆ 7.30ಕ್ಕೆ ಈ ಚಿತ್ರ ರಿಲೀಸ್ ಆಯಿತು. ಈ ಸಿನಿಮಾವನ್ನು ನೋಡಲು ಕಾತರರಾಗಿದ್ದ ಅಭಿಮಾನಿಗಳು ದಿಲ್​ ಬೆಚಾರ ಚಿತ್ರವನ್ನು ನೋಡಿ, ಅದನ್ನು ಬ್ಲಾಕ್​ಬಸ್ಟರ್ ಮಾಡುವ ಪಣ ತೊಟ್ಟಿದ್ದರು.

ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಹಾಗೂ ಸಂಜನಾ ಸಂಘಿ ಅವರ ಅಭಿನಯಕ್ಕೆ ಮುಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​ ಮಾಡಲು ಆರಂಭಿಸಿದ್ದರು ನೆಟ್ಟಿಗರು. ಎ.ಆರ್. ರೆಹಮಾನ್​ ಸಂಗೀತ ಸಿನಿಪ್ರಿಯರ ಮನಮುಟ್ಟಿದೆ.

ಇನ್ನು ಐಎಂಡಿಬಿಯನಲ್ಲಿ ಸುಶಾಂತ್ ಅಭಿನಯದ ಈ ಚಿತ್ರಕ್ಕೆ 10/10 ರೇಟಿಂಗ್​ ಸಿಕ್ಕಿದೆ. ಅತಿ ಹೆಚ್ಚು ರೇಟಿಂಗ್​ ಪಡೆದ ಸಿನಿಮಾಗಳ ಸಾಲಿನಲ್ಲಿ ಸುಶಾಂತ್​ ಚಿತ್ರ ಸಹ ಜಾಗ ಗಿಟ್ಟಿಸಿಕೊಂಡಿದೆ. ಸದ್ಯಕ್ಕೆ ಐಎಂಡಿಬಿಯಲ್ಲಿ ಅತಿಹೆಚ್ಚು ರೇಟಿಂಗ್​ ಪದೆಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ದಿಲ್​ ಬೆಚಾರ.

ಐಎಂಡಿಬಿ ಹಾಗೂ ಈ ವಿಷಯ ಸದ್ಯ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಈ ಸಿನಿಮಾವನ್ನುಅತಿ ಹೆಚ್ಚು ರೇಟಿಂಗ್​ ಪಡೆದ ಚಿತ್ರವನ್ನಾಗಿಸಲು ನೆಟ್ಟಿಗರು ಶ್ರಮಪಡುತ್ತಿದ್ದಾರೆ. ಐಎಂಡಿಬಿಯಲ್ಲಿ ಈ ರೇಟಿಂಗ್​ ಸಿಕ್ಕ ನಂತರವಂತೂ ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಈ ಚಿತ್ರದಲ್ಲಿ ಸುಶಾಂತ್​ ಮ್ಯಾನಿ ಪಾತ್ರದಲ್ಲಿ ಹಾಗೂ ಸಂಜನಾ ಕಿಝಿ ಬಸು ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಲವ್​ಸ್ಟೋರಿ ಟ್ರಾಜಿಕ್​ ಆದರೂ ಅದರಲ್ಲೂ ಒಂದು ಒಳ್ಳೆಯ ಸಂದೇಶವಿದೆ.

ಇನ್ನು ಐಎಂಡಿಬಿ ರೇಟಿಂಗ್​ ಸರ್ವರ್​ ಕ್ರ್ಯಾಶ್​ ಆಗಿತ್ತು. ಈ ಮಟ್ಟಕ್ಕೆ ನೆಟ್ಟಿಗರು ಸುಶಾಂತ್​ ಸಿನಿಮಾವನ್ನು ಹಿಟ್​ ಮಾಡಲು ಶ್ರಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಐಎಂಡಿಬಿ ಇಂಡಿಯನ್​ ಸರ್ವರ್​ ಕ್ರ್ಯಾಶ್​ ಆಗಿರಬೇಕು ಎನ್ನಲಾಗುತ್ತಿದೆ.

Comments are closed.