ಮನೋರಂಜನೆ

ಕನ್ನಡ ಚಿತ್ರರಂಗದ​​ ಡ್ರಗ್​​ ಸ್ಕ್ಯಾಂಡಲ್​​ ಬಗ್ಗೆ ದೊಡ್ಡಣ್ಣ ಮಾತು !

Pinterest LinkedIn Tumblr

ಸ್ಯಾಂಡಲ್​ ವುಡ್​ಗೆ ಡ್ರಗ್ ಮಾಫಿಯಾ ಲಿಂಕ್ ಇದೆ ಎಂಬ ವಿಷಯದ ಕುರಿತು ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಚಂದನವನದಲ್ಲಿ ಖಂಡಿತವಾಗಿಯೂ ಈ ನಶೆ ಮಾಫಿಯ ಇಲ್ಲ. ನಾವು ಇಂಡಸ್ಟ್ರಿಗೆ ಬಂದಾಗಿನಿಂದ ಈ ರೀತಿಯಾ ದಂಧೆಯನ್ನು ನಾವು ಕಂಡೂ ಇಲ್ಲ. ಕೇಳಿಯೂ ಇಲ್ಲ ಎಂದಿದ್ದಾರೆ.

ಇದ್ದ ಸರ್ಕಾರಿ ನೌಕರಿಗಳನ್ನು ಬಿಟ್ಟು ಕಲೆಯನ್ನು ನಂಬಿಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೀವಿ ನಾವು. ಆ ದಿನಗಳಲ್ಲಿ ನಮಗೆ ಎರಡೊತ್ತಿನ ಅನ್ನ ಸಿಕ್ಕಿದ್ದರೆ ಸಾಕಿತ್ತು ಎನ್ನುವಂತ ಪರಿಸ್ಥಿತಿಯಲ್ಲಿದ್ದೆವು. ತುತ್ತಿನ ಚೀಲ ತುಂಬಿಸಿಕೊಳ್ಳಲು ಸೆಣಸಾಡುತ್ತಿದ್ದೆವು.

ಚಿತ್ರರಂಗ ನಮಗೆ ಗುರುಕುಲ ಇದ್ಹಾಗೆ. ನಮ್ಮ ತಾಯಿಯ ರೀತಿ ಇದನ್ನು ನಾವು ಕಾಣುತ್ತಿದ್ದೇವೆ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಕೆಲವರನ್ನು ಮಾತ್ರಾ ಆರಿಸಿಕೊಳ್ಳುತ್ತದೆ ಎಂಬ ಮಾತನ್ನು ನಂಬಿರುವವರು ನಾವು. ಗಾಂಜಾ ಬಗ್ಗೆಯೆಲ್ಲ ನಮ್ಮ ತಲೆಯಲ್ಲಿ ಆಲೋಚನೆಯು ಬಂದಿರಲಿಲ್ಲ, ಅದಕ್ಕೆ ನಮ್ಮ ಬಳಿ ಸಮಯವೂ ಇರಲಿಲ್ಲ ಎಂದಿದ್ದಾರೆ. ದೇವರಾಣೆಯಾಗಿಯೂ ಸ್ಯಾಂಡಲ್ ವುಡ್​ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಅನ್ನೋದು ನಮಗೆ ಗೊತ್ತಿಲ್ಲ ಮತ್ತು ಅದು ಯಾವ ರೀತಿ ಇರುತ್ತೆ ಬಗ್ಗೆಯೂ ಗೊತ್ತಿಲ್ಲ ಎಂದು ದೊಡ್ಡಣ್ಣ ಕಿಡಿಕಾರಿದ್ದಾರೆ.

ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್​ ಯುವ ಸಾಮ್ರಾಟ್ ಚಿರು ಸರ್ಜಾ ರವರ ಹೆಸರು ಪ್ರಸ್ತಾಪ

ಸತ್ತವರ ವಿಷಯವನ್ನು ಈ ಮಾಫಿಯಾದಲ್ಲಿ ಪ್ರಸ್ತಾಪ ಮಾಡಿರುವುದು ನನಗೆ ಬಹಳ ನೋವನ್ನುಂಟು ಮಾಡಿದೆ. ನಮಗೂ ಹೆಣ್ಣು ಮಕ್ಕಳಿದ್ದಾರೆ. ಆ ಮಗು ಇನ್ನು ಎಷ್ಟು ನೋವನ್ನು ಸಹಿಸಿಕೊಳ್ಳಬೇಕು..? ಸ್ವಲ್ಪ ಆಳವಾಗಿ ಯೋಚನೆ ಮಾಡಿ. ಗಂಡನ ಅಕಾಲಿಕ ಮರಣದ ನೋವಿನಲ್ಲಿರುವ ತುಂಬು ಗರ್ಭಿಣಿಗೆ ಮತ್ತಷ್ಟು ನೋವು ಕೊಡುವುದು ಸರಿಯಲ್ಲ ಎಂದು ಹಿರಿಯ ನಟ ದೊಡ್ಡಣ್ಣ ಭಾವುಕರಾದ್ರು.

ಗಾಂಧಿನಗರ ಅಲ್ಲ ಗಾಂಜಾ ನಗರವಾಗಿದೆ.

ನಮ್ಮ ತಾಯಿ ಮೇಲಾಣಿ ಗಾಂಧಿ ನಗರ ಗಾಂಜಾ ನಗರವಾಗಿಲ್ಲ. ಈ ಹೊತ್ತಿನ ಕೊರೋನಾ ಪರಿಸ್ಥಿತಿಯಲ್ಲಿ ಕೆಲಸ ವಿಲ್ಲದೆ ಕೈಗಳು ಕೈ ಕಟ್ಟಿ ನಿಂತಿವೆ. ಕೆಲಸಕ್ಕೋಸ್ಕರ ಹಾತೊರೆದು ಕಾಯುತ್ತಿದ್ದಾವೆ. ಕೆಲಸ ಕೊಡಿ, ಬೇಗ ಚಿತ್ರೀಕರಣ ಆರಂಭಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳನ್ನು ಓಪನ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಡ್ರಗ್ ತೆಗೆದುಕೊಳ್ಳುವುದಕ್ಕೆ ಅವರ ಬಳಿ ಸಮಯವೂ ಇಲ್ಲ. ಅವರತ್ರ ಹಣವೂ ಇಲ್ಲ. ಚಿತ್ರೋದ್ಯಮ ಅಲ್ಲದ ಇನ್ನಾರೋ ಇದನ್ನು ಮಾಡಿರಬಹುದು ಎಂದಿದ್ದಾರೆ.

 

Comments are closed.