ಮನೋರಂಜನೆ

ನಟ ಸುದೀಪ್​ ಹುಟ್ಟುಹಬ್ಬಕ್ಕೆ ‘ಕೋಟಿಗೊಬ್ಬ 3’ ಟೀಸರ್​ ಬಿಡುಗಡೆ

Pinterest LinkedIn Tumblr

ಸುದೀಪ್​ ಹುಟ್ಟುಹಬ್ಬಕ್ಕೆ ‘ಕೋಟಿಗೊಬ್ಬ 3’ ಚಿತ್ರದ ಇನ್ನೊಂದು ಟೀಸರ್​ ಬಿಡುಗಡೆಯಾಗುತ್ತದೆ ಎಂದು ಕೆಲವು ದಿನಗಳ ಹಿಂದೆಯೇ ಆ ಚಿತ್ರದ ತಂಡದಿಂದ ಘೋಷಣೆಯಾಗಿತ್ತು. ಈ ಮಧ್ಯೆ, ‘ಫ್ಯಾಂಟಮ್​’ ಚಿತ್ರತಂಡದಿಂದಲೂ ಟೀಸರ್​ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.

‘ಕೋಟಿಗೊಬ್ಬ 3’ ಚಿತ್ರದ ಟೀಸರ್​ ಬಿಡುಗಡೆಯಾಗುತ್ತಿರುವುದರಿಂದ, ಎರಡೂ ಚಿತ್ರಗಳ ಮಧ್ಯೆ ಕ್ಲಾಶ್​ ಬೇಡ ಎನ್ನುವ ಕಾರಣಕ್ಕೆ ‘ಫ್ಯಾಂಟಮ್​’ ನಿರ್ದೇಶಕ ಅನೂಪ್​ ಭಂಡಾರಿ ಚಿತ್ರದ ಟೀಸರ್​ ಬಿಡುಗಡೆ ಮಾಡದಿರುವುದಕ್ಕೆ ನಿರ್ಧರಿಸಿದ್ದಾರೆ. ಅದರಂತೆ, ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ‘ಕೋಟಿಗೊಬ್ಬ 3’ ಚಿತ್ರದ ಹೊಸ ಟೀಸರ್​ ಬಿಡುಗಡೆಯಾಗಿದೆ.

ಇತ್ತೀಚೆಗಷ್ಟೇ, ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದಿಂದ ಯಾವುದೇ ಅಪ್​ಡೇಟ್​ಗಳಿಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಈ ಹಿಂದೆ ಒಂದು ಲಿರಿಕಲ್​ ಹಾಡು ಮತ್ತು ಟೀಸರ್​ ಬಿಟ್ಟರೆ, ಬೇರೇನೂ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದರು.

ಅದಕ್ಕೆ ಸರಿಯಾಗಿ, ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಇಂದು (ಬುಧವಾರ) ‘ಕೋಟಿಗೊಬ್ಬ 3’ ಟೀಸರ್​ ಬೆಳಿಗ್ಗೆ 11 ಗಂಟೆಗೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ ಟೀಸರ್​ ಬಿಡುಗಡೆಯಾಗುವುದು ಸ್ವಲ್ಪ ತಡವಾಗಿ, ಇದೀಗ 11.30ಕ್ಕೆ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್​, ಅಫ್ತಾಬ್​ ಶಿವದಾಸಾನಿ, ರವಿಶಂಕರ್​ ಮುಂತಾದವರು ನಟಿಸಿದ್ದಾರೆ. ಶಿವಕಾರ್ತಿಕ್​ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ಒಂದು ಹಾಡು ಜನಪ್ರಿಯವಾಗಿದೆ.

 

Comments are closed.