ಮನೋರಂಜನೆ

ಸುಶಾಂತ್​ ಸಾವನ್ನು​ ಹತ್ಯೆ ಎನ್ನುವುದಕ್ಕೆ ಪುರಾವೆ ಇಲ್ಲ; ಸಿಬಿಐ

Pinterest LinkedIn Tumblr

ಮುಂಬೈ (ಸೆಪ್ಟೆಂಬರ್ 2): ಬಾಲಿವುಡ್ನಟ ಸುಶಾಂತ್ಸಿಂಗ್ರಜಪೂತ್ಆತ್ಮಹತ್ಯೆ ಮಾಡಿಕೊಂಡು ಎರಡುವರೆ ತಿಂಗಳೇ ಕಳೆದಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಕೆಲವರ ವಾದ. ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಗಳು ಕೇಳಿ ಬಂದಿತ್ತು. ಅಂತೆಯೇ ಸುಪ್ರೀಂಕೋರ್ಟ್ಆದೇಶದಂತೆ ಪ್ರಕರಣವನ್ನು ಮುಂಬೈ ಪೊಲೀಸರು ಕೇಂದ್ರ ತನಿಖಾ ದಳಕ್ಕೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ಪ್ರಕರಣವನ್ನು ಸಿಬಿಐ ವಿಚಾರ ಮಾಡುತ್ತಿದೆ. ಆದರೆ, ಇಲ್ಲಿವರೆಗಿನ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸುಶಾಂತ್​ ಸಿಂಗ್​ ಜೂನ್​ 14ರಂದು ಮೃತಪಟ್ಟಿದ್ದರು. ಅವರು ಮೃತಪಟ್ಟ ನಂತರದಲ್ಲಿ ಅನೇಕರು ಇದು ಕೊಲೆ ಎಂದು ಬಣ್ಣಿಸಿದ್ದರು.  ಇದೇ ವೇಳೆ ಸುಶಾಂತ್​ ಮಾಜಿ ಪ್ರೇಯಸಿ ರಿಯಾ ಹೆಸರು ಕೂಡ ಥಳಕು ಹಾಕಿಕೊಂಡಿತ್ತು. ಈ ಎಲ್ಲ ಕಾರಣಕ್ಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು.

ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಕೇವಲ ಕೊಲೆ ಮಾತ್ರವಲ್ಲದೆ ಸಿಬಿಐ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಆರಂಭಿಸಿದೆ. ಈ ಮೂಲಕ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದೆ. ಮೂಲಗಳು ಹೇಳುವ ಪ್ರಕಾರ, ಸುಶಾಂತ್​ ಹತ್ಯೆಗೆ ಒಳಗಾಗಿದ್ದಾರೆ ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

 

ಸುಶಾಂತ್​ ಸಿಂಗ್​ ಪ್ರಕರಣವನ್ನು ಈ ಮೊದಲು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು.

 

Comments are closed.