ಮನೋರಂಜನೆ

ರಿಯಾ ಚಕ್ರವರ್ತಿಯ ಜಾಮೀನು ಅರ್ಜಿ ವಜಾಗೊಳಿಸಿದ ಮುಂಬೈ ನ್ಯಾಯಾಲಯ

Pinterest LinkedIn Tumblr


ಮುಂಬೈ: ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಮತ್ತು ಡ್ರಗ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಜಾಮೀನು ಅರ್ಜಿ ಮುಂಬೈ ಕೋರ್ಟ್​ ಇಂದು ವಜಾಗೊಳಿಸಿದೆ.

ಇತ್ತ ಸಹೋದರ ಶೋವಿಕ್​ ಚಕ್ರವರ್ತಿ ಸೇರಿ ಒಟ್ಟು ಎಂಟು ಮಂದಿಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದೂ ಸಹ ವಜಾಗೊಂಡಿದೆ. ಸದ್ಯ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲಿ ಉಳಿಯಲಿದ್ದು, ಸೆಪ್ಟೆಂಬರ್ 22 ರವರೆಗೆ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ. ಇತ್ತ ರಿಯಾ ಪರ ವಕೀಲರು ಜಾಮೀನುಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಜಾಮೀನು ಅರ್ಜಿ ವಜಾಗೊಂಡಿದ್ದಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಜಾಮೀನು ನೀಡಿ ಹೊರಗೆ ಬಿಟ್ಟರೆ, ಸಾಕ್ಷ್ಯ ಸಾಶ ಮಾಡುವ ಸಂಭವ ಹೆಚ್ಚಿದೆ. ತಮ್ಮ ಘನತೆಯನ್ನು ಬಳಸಿಕೊಂಡು ಪ್ರಕರಣವನ್ನೇ ತಿರುಚುವ ಸಾಧ್ಯತೆಗಳಿವೆ. ಆ ಕಾರಣಕ್ಕೆ ಜಾಮೀನು ಅರ್ಜಿ ವಜಾ ಮಾಡಲಾಗಿದೆ ಎಂದು ತಿಳಿಸಿದೆ.

Comments are closed.