ಬೆಂಗಳೂರು: ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಪತಿಯ ನೆನಪಲ್ಲೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.
ಪತಿ ಚಿರಂಜೀವಿಯ ಅಗಲಿಕೆ ನೋವಿರುವ ಕಾರಣ ಸೀಮಂತ ಕಾರ್ಯಕ್ರಮ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆದಿದೆ.
ಚಿರು ದೊಡ್ಡ ಕಟೌಟ್ ಇಟ್ಟು ಮೇಘನಾ ತಾವು ಅದರ ಸಮ್ಮುಖದಲ್ಲೇ ಸೀಮಂತ ಶಾಸ್ತ್ರ ಮುಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಭಾಗವಹಿಸಿದ್ದರು.
ಇನ್ನು ಮೇಘನಾ ಇತ್ತೀಚೆಗೆ ಸೃಜನ್ ಲೋಕೇಶ್ ಜೊತೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.
Comments are closed.