ಮನೋರಂಜನೆ

ಗುಟ್ಟಾಗಿ ಮತ್ತೊಂದು ಮದುವೆಯಾದ ತಮಿಳು ನಟ ಪ್ರಭುದೇವ್?

Pinterest LinkedIn Tumblr


ಚೆನ್ನೈ: ತಮಿಳು ನಟ ಪ್ರಭುದೇವ್ ಗುಟ್ಟಾಗಿ 2ನೇ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

ಬಿಹಾರದ ಫಿಸಿಯೋಥೆರಪಿಸ್ಟ್ ವೈದ್ಯೆ ಜೊತೆ ಸೆಪ್ಟಂಬರ್ ನಲ್ಲಿ ಸಪ್ತಪದಿ ತುಳಿದಿದ್ದಾರಂತೆ. ಮುಂಬೈನಲ್ಲಿರುವ ಪ್ರಭುದೇವ ಅವರ ನಿವಾಸದಲ್ಲಿ ರಹಸ್ಯವಾಗಿ ವಿವಾಹ ಮಾಡಿಕೊಂಡಿರುವ ಈ ಜೋಡಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ.

ಈ ವಿಷಯವನ್ನು ಪ್ರಭುದೇವ ಅವರ ಸಮೀಪವರ್ತಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪ್ರಭುದೇವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ.

ಈ ಹಿಂದೆ ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವಾ ಫಿಸಯೋ ಥೆರಪಿ ಚಿಕಿತ್ಸೆಪಡೆದುಕೊಳ್ಳತ್ತಿದ್ದರು. ಈ ವೇಳೆ ಪ್ರಭುದೇವ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯೆಯನ್ನೇ ಪ್ರೀತಿಸಿ.. ಕೆಲ ಸಮಯ ಡೇಟಿಂಗ್ ನಂತರ, ಇಬ್ಬರೂ ವಿವಾಹವಾಗಿದ್ದಾರೆ.

ಪ್ರಭುದೇವ ಅವರ ಎರಡನೇ ವಿವಾಹ ಕುರಿತ ವದಂತಿಗಳು ತಮಿಳು ಚಿತ್ರರಂಗದಲ್ಲಿ ಕೆಲ ಸಮಯದಿಂದ ಹರಿದಾಡುತ್ತಿವೆ.

ಪ್ರಭುದೇವ 1995ರಲ್ಲಿ ರಾಮಲತಾರನ್ನು ವಿವಾಹವಾಗಿದ್ದರು. 2011ರಲ್ಲಿ ವಿಚ್ಚೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ನಂತರ ನಾಯಕಿ ನಟಿ ನಯನತಾರಾ ಅವರೊಂದಿಗೆ ಪ್ರಭುದೇವ ಹೆಸರು ಕೇಳಿಬಂದಿತ್ತು. ಅದು ಹೆಚ್ಚು ಕಾಲ ಉಳಿಯಲಿಲ್ಲ. ನಯನತಾರಾ ಕೂಡ ಮೊದಲು ಶಿಂಬು ನಂತರ ಪ್ರಭುದೇವ ಜೊತೆ ಸಂಬಂಧ ಹೊಂದಿದ್ದರು. ಈಗ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಭುದೇವ ಸದ್ಯ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದಿಶಾ ಪಟಾನಿ ಈ ಚಿತ್ರದ ನಾಯಕಿ. ಮುಂದಿನ ವರ್ಷದ ಜನವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸಿದ್ದಾರೆ.

Comments are closed.