ಮುಂಬೈ: ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೋನಾದಿಂದ ಸಾವಿನ್ನಪ್ಪಿದ್ದರು ಎಂಬುದರ ಸುತ್ತ ಅನೇಕ ಅನುಮಾನಗಳು ಆರಂಭವಾಗಿವೆ. ನಟಿಯ ಸಾವಿಗೆ ಪರೋಕ್ಷವಾಗಿ ಪತಿ ಗಗನ್ ಕಾರಣ ಎಂದು ಅನೇಕರು ಆರೋಪಿಸಲಾರಂಭಿಸಿದ್ದಾರೆ. ಅದರ ಬೆನ್ನಲ್ಲೇ ನಟಿ ಬರೆದಿಟ್ಟಿದ್ದ ಪತ್ರವೊಂದು ಸಿಕ್ಕಿದ್ದು, ಆಕೆಯ ಆಪ್ತ ಸ್ನೇಹಿತೆಯೂ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ದಿವ್ಯಾ, ಗಗನ ಗಬ್ರೂ ಹೆಸರಿನ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಆದರೆ ಮದುವೆಯಾದಾಗಿನಿಂದ ಆತ ನಟಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ಇದರ ಬಗ್ಗೆ ಯಾರಿಗೂ ಹೇಳಿಕೊಳ್ಳದ ನಟಿ ನವೆಂಬರ್ 7ರಂದು ತನಗೆ ಗಂಡನಿಂದ ಆಗುತ್ತಿರುವ ತೊಂದರೆಯ ಬಗ್ಗೆ ಪತ್ರ ಬರೆದಿಟ್ಟಿದ್ದಾಳೆ. ನವೆಂಬರ್ 16ರಂದು ಪೊಲೀಸ್ ಠಾಣೆಯಲ್ಲಿ ನಾನ್ ಕಾಂಗ್ಜಿನೇಬಲ್ (ಎನ್ಸಿ) ಪ್ರಕರಣ ದಾಖಲಿಸಿ ಬಂದಿದ್ದಾರೆ. ಇದಾದ ನಂತರ ನಟಿಗೆ ಕರೊನಾ ದೃಢವಾಗಿದ್ದು, ಆಕೆ ಸೋಮವಾರ ಮೃತರಾಗಿದ್ದಾರೆ.
ದಿವ್ಯಾ ಅವರ ಮನೆಯಲ್ಲಿ ಹುಡುಕುವಾಗ ಪತ್ರ ಸಿಕ್ಕಿರುವುದಾಗಿ ಆಕೆಯ ಸಹೋದರ ದೇವಶಿಶ್ ತಿಳಿಸಿದ್ದಾರೆ. ಅವರ ಜತೆ ದಿವ್ಯಾ ಅವರ ಆಪ್ತ ಸ್ನೇಹಿತೆ ದೇವೊಲೀನಾ ಭಟ್ಟಾಚಾರ್ಜಿ ಕೂಡ ಗಗನ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ದಿವ್ಯಾ ಮದುವೆಯಾದಾಗಿನಿಂದಲೂ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ. ಆಕೆ ಗಗನ್ನನ್ನು ಮದುವೆಯಾಗುವುದು ಆಕೆಯ ಕುಟುಂಬಕ್ಕಾಗಲೀ ಅಥವಾ ನನಗಾಗಲಿ ಇಷ್ಟವಿರಲಿಲ್ಲ. ಆತನ ವಿರುದ್ಧ ಶಿಮ್ಲಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಆತ 6 ತಿಂಗಳ ಕಾಲ ಜೈಲುವಾಸದಲ್ಲಿದ್ದು ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ದಿವ್ಯಾಗೆ ಪ್ರತಿದಿನ ಹೊಡೆಯುತ್ತಿದ್ದ. ಅವಳ ಬಳಿ ಇದ್ದ ಚಿನ್ನಾಭರಣವನ್ನೆಲ್ಲವನ್ನೂ ದೋಚಿದ್ದ. ಅವನಿಂದಲೇ ಆಕೆಗೆ ಡಯಾಬಿಟಿಸ್ ಬಂತು. ಅವನಿಂದ ಸಂಪೂರ್ಣವಾಗಿ ಕುಗ್ಗಿದ್ದ ಅವಳು ಕರೊನಾವನ್ನು ತಡೆಯಲಿಲ್ಲ ಎಂದು ದೆವೊಲೀನಾ ಆರೋಪಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿಡಿಯೋ ಹಾಕಿರುವ ಆಕೆ, ಗಗನ್ ಮತ್ತು ಆತನ ತಾಯಿಯನ್ನು ಜೀವನಪೂರ್ತಿ ಜೈಲಿನಲ್ಲೇ ಇರುವಂತೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆತನ ಜತೆ ಇರುವ ಸ್ನೇಹಿತೆಯರಿಗೆ, ಆತನಿಂದ ದೂರಾಗಿ, ಪ್ರಾಣ ಉಳಿಸಿಕೊಳ್ಳಿ ಎಂದು ಎಚ್ಚರಿಸಿದ್ದಾರೆ. (
Comments are closed.