ಮನೋರಂಜನೆ

3ಡಿ ರೂಪದಲ್ಲಿ ಬರಲಿರುವ ಸುದೀಪ್‌ ನಟನೆಯ ‘ವಿಕ್ರಾಂತ್ ರೋಣ’ 50 ದೇಶಗಳಲ್ಲಿ ಬಿಡುಗಡೆ

Pinterest LinkedIn Tumblr

ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ಇದರ ಬೆನ್ನಲ್ಲೇ ಹಲವು ಭಾಷೆಗಳಲ್ಲಿ ತೆರೆಯ ಮೇಲೆ ಬರಲಿರುವ ಈ ಚಿತ್ರವು 3ಡಿ ರೂಪದಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ.

ಚಂದನವನದಲ್ಲಿ ಸುದೀಪ್‌ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್‌ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್‌ ಈ ಕುರಿತು ಮಾಹಿತಿ ನೀಡಿದರು.

‘ಈ ಸಿನಿಮಾ ಕಥೆ ಅತ್ಯಂತ ಅದ್ಭುತವಾಗಿದೆ. ಇದನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ’ ಸಿನಿಮಾ 50 ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಫ್ರೆಂಚ್, ಅರೇಬಿಕ್, ಸ್ಪ್ಯಾನಿಷ್ ಮ್ಯಾಂಡರಿನ್ ಮತ್ತು ರಷ್ಯನ್ ಭಾಷೆಗಳಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.

ಭಾರತದ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಾಪಕ ಜಾಕ್‌ ಮಂಜು 3ಡಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾದ ಶೇ.50 ರಷ್ಟು ಕ್ರೆಡಿಟ್ ಜಾಕ್ ಮಂಜು ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ನಾನು ಮತ್ತು ಮಂಜು 1983-84ರ ಉತ್ತಮ ಸ್ನೇಹಿತರು ಮಂಜು. ಉದ್ಯಮಿ , ಅವರೊಬ್ಬ ಪ್ರಾಮಾಣಿಕ ವ್ಯಕ್ತಿ. ನಾನು ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ 30 ಶೇಕಡಾ ಕ್ರೆಡಿಟ್ ನೀಡುತ್ತೇನೆ, ಎಲ್ಲಾ ತಂತ್ರಜ್ಞರಿಗೆ 10 ಶೇಕಡಾ, ನನ್ನ ಎಲ್ಲಾ ಸಹ-ಕಲಾವಿದರಿಗೆ 8 ಶೇಕಡಾ, ಮತ್ತು ಶೇಕಡಾ 2 ರಷ್ಟು ಕ್ರೆಡಿಟ್ ನಾನು ತೆಗೆದುಕೊಳ್ಳುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಅಪರೂಪವಾಗಿ ನೋಡುತ್ತೇವೆ, ಅದರಲ್ಲಿ ಅನೂಪ್ ಮತ್ತು ನಿರೂಪ್ ಭಂಡಾರಿ ಅಂತ ಪ್ರಾಮಾಣಿಕರು. ನೀತಾ ಅಶೋಕ್ ಸುದೀಪ್ ಗೆ ನಾಯಕಿಯಾಗಿದ್ದಾರೆ,ಉತ್ತಮವಾದ ತಂಡ ಇದು ಎಂದು ಸುದೀಪ್‌ ಶ್ಲಾಘಿಸಿದರು.

Comments are closed.