ಬೆಂಗಳೂರು: ಗುರುವಾರ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ರಾಬರ್ಟ್ ಎರಡನೇ ದಿನವೂ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ. ಕರ್ನಾಟಕದಲ್ಲಿ ಎರಡನೇ ದಿನ ರಾಬರ್ಟ್ 12 ಕೋಟಿ 78 ಲಕ್ಷ ರೂ. ಹಣ ಗಳಿಸಿದೆ.
ಬಿಕೆಟಿ ಮತ್ತು ಸೌತ್ ಕೆನರಾ – 5 ಕೋಟಿ(ಮಲ್ಟಿಪ್ಲೆಕ್ಸ್), ಎಂಎಂಸಿಎಚ್ -2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ -1.5 ಕೋಟಿ, ಶಿವಮೊಗ್ಗ -78 ಲಕ್ಷ, ಹೈದರಾಬಾದ್ ಕರ್ನಾಟಕ -2 ಕೋಟಿ, ಬಾಂಬೆ ಕರ್ನಾಟಕದಲ್ಲಿ 1.5 ಕೋಟಿ ಗಳಿಸಿದೆ.
ಕರ್ನಾಟಕದಲ್ಲಿ ಮೊದಲ ದಿನವೇ 17. 24 ಕೋಟಿ ಗಳಿಸಿದರೆ ಆಂಧ್ರ- ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು ಯಶ್ ಅಭಿನಯದ ಕನ್ನಡ ಕೆಜಿಎಫ್ ಮೊದಲ ದಿನ 12.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕೋವಿಡ್ ಲಾಕ್ಡೌನ್ ಬಳಿಕ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ದಚ್ಚು ಅಭಿಮಾನಿಗಳು ಸಂತೋಷದಿಂದ ಸಲೆಬ್ರೆಟ್ ಮಾಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.
Comments are closed.