ಮನೋರಂಜನೆ

ಕೆಲ ನಿರ್ದೇಶಕರು ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದರು ಎಂದ ಸಲ್ಮಾನ್ ಖಾನ್ ಮಾಜಿ ಪ್ರಿಯತಮೆ

Pinterest LinkedIn Tumblr

‘ಅಂತ್’, ‘ತೀಸ್ರಾ ಕೌನ್’, ‘ಆಂದೋಲನ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದವರು ಬಾಲಿವುಡ್‌ನ ಮಾಜಿ ನಟಿ ಸೋಮಿ ಅಲಿ. ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಹಾಗೂ ಸೋಮಿ ಅಲಿ ಎಂಟು ವರ್ಷಗಳ ಕಾಲ ಪ್ರೀತಿಸಿದ್ದರು. ಬಳಿಕ ಇವರಿಬ್ಬರು ದೂರಾದರು. ಬಾಲಿವುಡ್‌ಗೂ ಗುಡ್ ಬೈ ಹೇಳಿದ ಸೋಮಿ ಅಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಾಲಿವುಡ್‌ನ ಕರಾಳ ನೆನಪುಗಳು ಹಾಗೂ ಸಲ್ಮಾನ್ ಖಾನ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿ ಸೋಮಿ ಅಲಿ ಮತ್ತೆ ಸದ್ದು ಮಾಡಿದ್ದಾರೆ. ”ಬಾಲಿವುಡ್‌ನಲ್ಲಿ ನನಗೆ ಕೆಟ್ಟ ಅನುಭವವಾಗಿದೆ. ಎಷ್ಟೋ ಬಾರಿ ನಾನು ಮುಜುಗರ ಅನುಭವಿಸಿದ್ದೇನೆ. ಕೆಲ ನಿರ್ದೇಶಕರು ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದರು” ಎಂದು ಸಂದರ್ಶನವೊಂದರಲ್ಲಿ ಸೋಮಿ ಅಲಿ ಹೇಳಿದ್ದಾರೆ.

”ಯಾವುದೇ ಕಾರಣಕ್ಕೂ ನಾನು ಬಾಲಿವುಡ್‌ಗೆ ಕಮ್‌ಬ್ಯಾಕ್ ಮಾಡುವುದಿಲ್ಲ. ಬಾಲಿವುಡ್ ಬಗ್ಗೆ ನನಗೆ ಮುಂಚೆಯೂ ಇಂಟ್ರೆಸ್ಟ್ ಇರಲಿಲ್ಲ. ಈಗಲೂ ಇಲ್ಲ” ಎಂದು ಸೋಮಿ ಅಲಿ ತಿಳಿಸಿದ್ದಾರೆ.

ಸಲ್ಮಾನ್ ಖಾನ್‌ರಿಂದ ದೂರಾಗಿದ್ದು ಯಾಕೆ?
ಫ್ಲೋರಿಡಾದಲ್ಲಿ ನೆಲೆಸಿದ್ದ ಸೋಮಿ ಅಲಿ ತಮ್ಮ ಟೀನೇಜ್ ಕ್ರಶ್ ಸಲ್ಮಾನ್ ಖಾನ್‌ರನ್ನು ಮದುವೆಯಾಗಲು 1991ರಲ್ಲಿ ಮುಂಬೈಗೆ ಕಾಲಿಟ್ಟರು. ಆಗಿನ್ನೂ ಸೋಮಿ ಅಲಿಗೆ ಜಸ್ಟ್ 16 ವರ್ಷ ವಯಸ್ಸು. ಮಾಡೆಲಿಂಗ್ ಮಾಡುತ್ತಿದ್ದ ಸೋಮಿ ಅಲಿಗೆ ಬಾಲಿವುಡ್ ಕೈಬೀಸಿ ಕರೆಯಿತು. ಹಾಗೇ ಆಕೆ ಸಲ್ಮಾನ್ ಖಾನ್‌ಗೂ ಪರಿಚಿತರಾದರು. ಎಂಟು ವರ್ಷಗಳ ಕಾಲ ಸೋಮಿ ಅಲಿ-ಸಲ್ಮಾನ್ ಖಾನ್ ಡೇಟಿಂಗ್ ಮಾಡಿದ್ದರು. ಬಳಿಕ ಕಾರಣಾಂತರಗಳಿಂದ 1999ರಲ್ಲಿ ಸಲ್ಮಾನ್ ಖಾನ್‌ರಿಂದ ಸೋಮಿ ಅಲಿ ಬ್ರೇಕಪ್ ಮಾಡಿಕೊಂಡರು. ನಂತರ ಬಾಲಿವುಡ್‌ಗೂ ಗುಡ್ ಬೈ ಹೇಳಿದ ಸೋಮಿ ಅಲಿ ಫ್ಲೋರಿಡಾಗೆ ವಾಪಸ್ ತೆರಳಿದರು.

”ಸಲ್ಮಾನ್ ಖಾನ್‌ರಿಂದ ನಾನೇನೂ ಕಲಿತಿಲ್ಲ. ಆದರೆ, ಎಷ್ಟೋ ಒಳ್ಳೆಯ ವಿಷಯಗಳನ್ನು ನಾನು ಸಲ್ಮಾನ್ ತಂದೆ-ತಾಯಿಯಿಂದ ಕಲಿತಿದ್ದೇನೆ. ಅವರು ಯಾವುದೇ ಧರ್ಮವನ್ನು ನೋಡದೆ ಎಲ್ಲರನ್ನೂ ಸಮವಾಗಿ ಕಾಣುತ್ತಾರೆ. ಕಷ್ಟ ಎಂದು ಹೇಳಿಕೊಂಡು ಬರುವ ಎಲ್ಲರಿಗೂ ಅವರ ಮನೆಯ ಬಾಗಿಲು ತೆರೆದಿರುತ್ತದೆ” ಎಂದು ಸಂದರ್ಶನವೊಂದರಲ್ಲಿ ಸೋಮಿ ಅಲಿ ಹೇಳಿದ್ದಾರೆ.

Comments are closed.