ಮನೋರಂಜನೆ

ಪಣಂಬೂರು ಬೀಚ್‌ನಲ್ಲಿ ಮಾರ್ಚ್1ರಿಂದ 3ರ ವರೆಗೆ ಜಾನಪದ ಕಡಲೋತ್ಸವ : ಗಾಳಿಪಟ ಪ್ರದರ್ಶನ, ಆಹಾರ ಮೇಳ

Pinterest LinkedIn Tumblr

ಮಂಗಳೂರು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ. ಹಾಗೂ ಕದಳಿ ಬೀಚ್ ಟೂರಿಸಂ ಸಾರಥ್ಯದಲ್ಲಿ ರೋಹನ್ಸ್ ಕಾರ್ಪೊರೇಶನ್ ಇವರ ಸಹಯೋಗದೊಂದಿಗೆ ಜಾನಪದ ಕಡಲೋತ್ಸವ ಪಣಂಬೂರು ಬೀಚ್‌ನಲ್ಲಿ ಮಾರ್ಚ್ 1ರಿಂದ 3ರ ವರೆಗೆ ನಡೆಯಲಿರುವುದು ಎಂದು ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ತಿಳಿಸಿದರು.

ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕದ ನಾಡು ನುಡಿಯ ಜಾನಪದ ಸಂರಕ್ಷಣೆಗೆ ಕಟಿಬದ್ದವಾಗಿರುವ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕಳೆದ ಹಲವಾರು ವರುಷಗಳಿಂದ ಕರ‍್ಯಪ್ರವೃತವಾಗಿದೆ. ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಈ ನಿಟ್ಟಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಮಾರ್ಚ್ 1 ರಂದು ಕಾರ್ಯಕ್ರಮವನ್ನು ಘನವೆತ್ತ ಕರ್ನಾಟಕ ಸರಕಾರದ ರಾಜ್ಯಪಾಲರಾದ ಗೌರವಾನ್ವಿತ ಥಾವರ್‌ಚಂದ್ ಗೆಹ್ಹೋಟ್ ಸಂಜೆ 6.30ಕ್ಕೆ ಉದ್ಘಾಟಿಸಲಿರುವರು ಎಂದರು.

ವಿಧಾನ ಸಭೆಯ ಸ್ಪೀಕರ್ ಶ್ರೀ ಯು. ಟಿ. ಖಾದರ್ ಪ್ರದರ್ಶನಗಳನ್ನು ಉದ್ಘಾಟಿಸಲಿರುವರು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಡಾ| ವೈ. ಭರತ್ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಮಂಜಮ್ಮ ಜೋಗತಿ, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರಿನ ಆದಿತ್ಯ್ ನಂಜರಾಜ್, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಟ್ರಸ್ಟಿ ರ‍್ಯ ಬಾಲಕೃಷ್ಣ ಹೆಗ್ಡೆ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಉಪಸ್ಥಿತರಿರುವರು.

ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಅಧಾನಿ ಗ್ರೂಪ್‌ನ ಅಧ್ಯಕ್ಷರಾದ ಕಿಶೋರ್ ಆಳ್ವ, ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬಯಿಯ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ರೋಹನ್ ಕಾರ್ಪೊರೇಶನ್ ಸಂಸ್ಥಾಪಕರಾದ ರೋಹನ್ ಮೊಂತೆರೋ, ದಿವ್ಯರೂಪ ಕನ್ಸರ್ಷನ್ ಮಾಲಕರಾದ ಯಾದವ ಕೋಟ್ಯಾನ್ ಪೆರ್ಮುದೆ. ದೈವ ನರ್ತಕರಾದ ಮುಖೇಶ್ ಗಂಧಕಾಡ್ ಜಾನಪದ ಕಡಲೋತ್ಸವ ಗೌರವ ಪ್ರಶಸ್ತಿ ಪ್ರಧಾನ ನೀಡಲಾಗುವುದು. 7.30ರಿಂದ ಡಾ. ರಮೇಶ್ಚಂದ್ರ ಹಾಗೂ ಕಲಾವತಿ ದಯಾನಂದ ಬಳಗದಿಂದ ಜಾನಪದ ರಸಸಂಜೆ ಕಾರ್ಯಕ್ರಮ ಜರಗಲಿರುವುದು.

ಮಾರ್ಚ್ 2 ರಂದು ಸಂಜೆ5.30 ರಿಂದ ವಿಚಾರ ಸಂಕೀರ್ಣ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರಧಾನ ಕರ‍್ಯಕ್ರಮ ಜರಗಲಿರುವುದು. ಪುತ್ತೂರು ವಿಧಾನ ಸಭಾ ಶಾಸಕರಾದ ಅಶೋಕ್ ಕುಮಾರ್ ರೈ, ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಕ.ಜಾ.ಪ. ಬೆಂಗಳೂರು ಆಡಳಿತಾಧಿಕಾರಿ ನಂದಕುಮಾರ್ ಹೆಗ್ಡೆ ವಹಿಸಲಿರುವರು. ನಿವೃತ್ತ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಸಾಯಿ ಗೀತಾ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸರ್ ಹಾಗೂ ಜಾನಪದ ಸಾಹಿತಿ ಮೈಮ್ ರಾಮ್‌ದಾಸ್ ವಿಷಯ ಮಂಡಿಸಲಿರುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ರಮಾನಾಥ ರೈ, ಕೆ.ಪಿ.ಸಿ.ಸಿ. ಪ್ರಧಾನ ಕರ‍್ಯದರ್ಶಿ ಮಿಥುನ್ ರೈ, ರಾಜ್ಯ ಭಾರತೀಯ ಜನತಾ ಪಾರ್ಟಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಕುಳಾಯಿ ಫೌಂಡೇಶನ್ ಅಧ್ಯಕ್ಷರಾದ ಪ್ರತಿಭಾ ಕುಳಾಯಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಸುಮಿತ್ರ ಉಪಸ್ಥಿತಿಯಲ್ಲಿರುವರು.

ಸಂಜೆ 7.30ಕ್ಕೆ ಅಜಯ್ ವಾರಿಯರ್ ತಂಡದಿಂದ “ಸಂಗೀತ ರಸ ಸಂಜೆ” ನಡೆಯಲಿರುವುದು. ಕಾರ್ಯಕ್ರಮದಲ್ಲಿ ಜಾನಪದ ಪ್ರದರ್ಶನ, ಗಾಳಿಪಟ ಪ್ರದರ್ಶನ, ಆಹಾರ ಮೇಳವಿರುವುದು.

ಮಾರ್ಚ್ 3 ರಂದು ಸಂಜೆ 3ಕ್ಕೆ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ. ಡಿ. ವೇದವ್ಯಾಸ್ ಕಾಮತ್‌ರವರು ಗಾಳಿಪಟ ಪ್ರದರ್ಶನದ ಉದ್ಘಾಟನೆ ಮಾಡಲಿರುವರು. ಭಂಡಾರಿ ಬಿಲ್ರ‍್ಸ್ ಚೇರ್‌ಮ್ಯಾನ್ ಲಕ್ಷೀಶ್ ಭಂಡಾರಿ ಅಧ್ಯಕ್ಷತೆ ವಹಿಸಲಿರುವರು. ಅಂದು ಸಂಜೆ 4ರಿಂದ ಜಾನಪದ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಲಿರುವುದು. ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಾನಪದ ಪರಿಷತ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿರುವರು. ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಉದ್ಘಾಟಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಸಭೆ ಸದಸ್ಯರಾದ ಡಾ| ವೈ ಭರತ್ ಶೆಟ್ಟಿ ವಹಿಸಲಿರುವರು, ಮಾನ್ಯ ಜಿಲ್ಲಾಧಿಕಾರಿ ಮುಲ್ಮೆ ಮುಗಿಲನ್ ಪ್ರಶಸ್ತಿ ಪ್ರಧಾನ ಮಾಡಲಿರುವರು ಎಂದವರು ವಿವರ ನೀಡಿದರು..

ಪತ್ರಿಕಾಗೋಷ್ಠಿಯಲ್ಲಿ ಮೋಹನ್‌ದಾಸ್ ರೈ – ಉಪಾಧ್ಯಕ್ಷರು, ಜಾನಪದ ಪರಿಷತ್ ಜಿಲ್ಲಾ ಘಟಕ, ಡಾ. ರಾಜೇಶ್ ಆಳ್ವ- ಸಂಚಾಲಕರು, ಜಾನಪದ ಪರಿಷತ್ ಜಿಲ್ಲಾ ಘಟಕ, ತಾರಾನಾಥ್ ಶೆಟ್ಟಿ ಬೋಳಾರ್ – ಕೋಶಾಧಿಕಾರಿ, ಜಾನಪದ ಪರಿಷತ್ ಜಿಲ್ಲಾ ಘಟಕ, ರಾಜೇಶ್ ಸೈಲಾರ್ಕ್ ಪ್ರಧಾನ ಕಾರ್ಯದರ್ಶಿ, ಜಾನಪದ ಪರಿಷತ್ ಜಿಲ್ಲಾ ಘಟಕ, ಡಾ. ಮಾಲತಿ ಶೆಟ್ಟಿ ಮಾಣೂರು – ಪತ್ರಿಕಾ ಪ್ರತಿನಿಧಿ, ಸಂಪಾದಕಿ ಅಮೃತ ಪ್ರಕಾಶ ಪತ್ರಿಕೆ, ಮಂಗಳೂರು, ಚಂಚಲ ತೇಜೋಮಯ – ಅಧ್ಯಕ್ಷರು, ಕ.ಜಾ.ಪ. ಮಂಗಳೂರು ತಾಲೂಕು ಘಟಕ ಮುಂತಾದವರು ಉಪಸ್ಥಿತರಿದ್ದರು.

Comments are closed.