ಗ್ರೇಟರ್ ನೊಯಿಡಾ: ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಭಾರತೀಯ ಕ್ರಿಕೆಟ್ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
‘ಅಗತ್ಯವಿರುವ ಸಂದರ್ಭದಲ್ಲಿ ಶಶಾಂಕ್ ಮನೋಹರ್ ಬಿಸಿಸಿಐ ತೊರೆದರು ಎಂಬುದು ಮಂಡಳಿಯ ಬಹುತೇಕ ಸದಸ್ಯರ ಅಭಿಪ್ರಾಯ. ಬಿಸಿಸಿಐಗೆ ನೆರವು ಬೇಕಾದಾಗ ಶಶಾಂಕ್ ಅವರು ಮುಂದೆ ಬರಲಿಲ್ಲ. ಅವರು ಇಂದು ಯಾವ ಸ್ಥಾನದಲ್ಲಿದ್ದಾರೋ ಅದಕ್ಕೆ ಬಿಸಿಸಿಐ ಮೆಟ್ಟಿಲಾಗಿದೆ. ಆದರೆ ಅವರಿಂದು ಭಾರತೀಯ ಕ್ರಿಕೆಟ್ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ’ ಎಂದು ಅನುರಾಗ್ ದೂರಿದ್ದಾರೆ.
‘ಶಶಾಂಕ್ ಮುಳುಗುತ್ತಿರುವ ಹಡಗಿನಿಂದ ಪರಾರಿಯಾಗುವ ಮುಖ್ಯನಾವಿಕ ಇದ್ದಂತೆ. ಐಸಿಸಿ ವಿಷಯ ಬಂದಾಗ ಬಿಸಿಸಿಐ ಹಿತ ಕಾಯುವುದು ಅವರಿಗೆ ಬೇಕಾಗಿಲ್ಲ’ ಎಂದು ಅನುರಾಗ್ ಹೇಳಿದ್ದಾರೆ.
2017ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವಿಚಾರದಲ್ಲಿ ಶಶಾಂಕ್ ಮನೋಹರ್ ಅವರ ನಡೆಯನ್ನು ಅನುರಾಗ್ ವಿರೋಧಿಸಿದ್ದಾರೆ.
‘ಶಶಾಂಕ್ ಅವರ ಹೇಳಿಕೆಯಿಂದ ನನಗೆ ನೋವಾಗಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಬಿಸಿಸಿಐ ಮುಖ್ಯಸ್ಥನಾಗಿ ನಮ್ಮ ಸದಸ್ಯರ ಭಾವನೆಗಳಿಗೆ ದನಿಯಾಗುವುದು ನನ್ನ ಕರ್ತವ್ಯ’ ಎಂದು ಅನುರಾಗ್ ಹೇಳಿದ್ದಾರೆ.
Comments are closed.