ನವದೆಹಲಿ: ಡೇವಿಸ್ ಕಪ್ ಪಂದ್ಯಾವಳಿಯ ವಿಶ್ವ ಗುಂಪಿನ ಫ್ಲೇ ಆಫ್ ನ ಸಿಂಗಲ್ಸ್ ನಲ್ಲಿ ಸ್ಪೇನ್ ನ ದೈತ್ಯ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ಹೊಟ್ಟೆ ನೋವಿನಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದು, ನಡಾಲ್ ವಿರುದ್ಧ ಸೆಣಸಬೇಕಿದ್ದ ಭಾರತದ ರಾಮ್‌ಕುಮಾರ್ ರಾಮನಾಥನ್ ಫೆಲಿಸಿಯಾನೋ ಲೋಪೇಜ್ ರೊಂದಿಗೆ ಸೆಣಸಲಿದ್ದಾರೆ.
ರಫಲ್ ನಡಾಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರ ನಡುವಿನ ಪಂದ್ಯ ಸಂಜೆ 5 ಗಂಟೆಗೆ ಶುರುವಾಗಬೇಕಿತ್ತು. ಆದರೆ ನಡಾಲ್ ಹೊಟ್ಟೆ ನೋವಿನಿಂದ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ರಾಮ್‌ಕುಮಾರ್ ರಾಮನಾಥನ್ ಫೆಲಿಸಿಯಾನೋ ಲೋಪೇಜ್ ಅವರೊಂದಿಗೆ ಸೆಣಸಲಿದ್ದಾರೆ.
ಇನ್ನು ಸಿಂಗಲ್ಸ್ ವಿಭಾಗದ ಎರಡನೇ ಪಂದ್ಯ ಸಾಕೇತ್ ಮೈನೇನಿ ಮತ್ತು ವಿಶ್ವದ 13ನೇ ಶ್ರೇಯಾಂಕದ ಡೇವಿಡ್ ಫೆರರ್ ಜತೆ ಸೆಣಸಲಿದ್ದಾರೆ.
ಇನ್ನು ಸೆಪ್ಟೆಂಬರ್ 17ರಂದು ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಮತ್ತು ಸಾಕೇತ್ ಮೈನೇನಿ ಸ್ಪೇನ್ ನ ಮಾರ್ಕ್ ಲೋಪೇಜ್ ಮತ್ತು ಫೆಲಿಸಿಯಾನೊ ಲೋಪೇಜ್ ಜತೆ ಸೆಣಸಲಿದ್ದಾರೆ.
ಕ್ರೀಡೆ
Comments are closed.