ಕ್ರೀಡೆ

ಸಚಿನ್‌ ದತ್ತು ತೆಗೆದುಕೊಂಡ ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Pinterest LinkedIn Tumblr

sachin

ನವದೆಹಲಿ: ಕ್ರಿಕೆಟ್ ದಂತಕತೆ ಸಚಿನ್‌ ತೆಂಡೂಲ್ಕರ್‌ ತಾವು ದತ್ತು ಸ್ವೀಕರಿಸಿರುವ ಗುಡೂರ್‌ನ ಪುಟ್ಟಮ್‌ ರಾಜುವರಿ ಕಾಂಡ್ರಿಗಾ ಗ್ರಾಮದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.

627 ಮನೆಗಳಿರುವ ಈ ಗ್ರಾಮದಲ್ಲಿ 1895 ಮಂದಿ ಜನಸಂಖ್ಯೆಯಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಆಗಮಿಸಿದ ಸಚಿನ್‌ ತೆಂಡೂಲ್ಕರ್‌ ಅವರನ್ನು ಊರಿನ ನೂರಾರು ಮಂದಿ ಪ್ರೀತಿಯಿಂದ ಬರಮಾಡಿಕೊಂಡರು. ಈ ಗ್ರಾಮದಲ್ಲಿ ಹಲವು ಮಕ್ಕಳಿಗೆ ಸಚಿನ್ ಕ್ರಿಕೆಟ್ ಬ್ಯಾಟ್ ಮತ್ತು ಕಿಟ್ ವಿತರಿಸಿದರು,

ತಾವು ದತ್ತು ಸ್ವೀಕರಿಸಿರುವ ಗ್ರಾಮ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿಗೆ ಎಂದು ಸಚಿನ್‌ ಸಂತಸದಿಂದ ನುಡಿದರು. ಗ್ರಾಮದಲ್ಲಿ ಸುಮಾರು 90 ನಿಮಿಷಗಳ ಕಾಲ ಇದ್ದ ಸಚಿನ್‌ ಅಲ್ಲಿಯ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು. ಸಚಿನ್ ದತ್ತು ತೆಗೆದು ಕೊಂಡಿರುವ ಗ್ರಾಮದಲ್ಲಿ ಈಗ 24*7 ವಿದ್ಯುತ್ ಸೌಲಭ್ಯ ವಿರುತ್ತದೆ. ಆ ಮೊದಲು ಅಲ್ಲಿನ ರಸ್ತೆಗಳು ತೀರಾ ಕೆಟ್ಟದ್ದಾಗಿದ್ದವು. ಈಗ ರಸ್ತೆಗಳೆಲ್ಲಾ ಚೆನ್ನಾಗಿದ್ದು, ಗ್ರಾಮ ಸ್ವಚ್ಚ ಹಾಗೂ ಸುಂದರವಾಗಿ ಕಾಣುತ್ತಿದೆ. ನೀರಿಗಾಗಿ ಮಹಿಳೆಯರು ಈಗ ಮೈಲಿಗಟ್ಟಲೇ ನಡೆದು ಹೋಗುವಂತಿಲ್ಲ.

ರಾಜ್ಯಸಭಾ ಸದಸ್ಯರಾಗಿರುವ ಸಚಿನ್‌ ತೆಂಡೂಲ್ಕರ್‌ 2014ರಲ್ಲಿ ಪ್ರಧಾನ ಮಂತ್ರಿಯವರ ಸಂಸದ್‌ ಆದರ್ಶ ಗ್ರಾಮ ಯೋಜನೆಯ ಮೂಲಕ ಈ ಗ್ರಾಮವನ್ನು ದತ್ತು ಪಡೆದಿದ್ದರು.

Comments are closed.