ನವದೆಹಲಿ: ಕೋಚ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಒಬ್ಬರು ಆರೋಪಿಸಿದ್ದಾರೆ. ಶೂಟರ್ ಅವರ ದೂರಿನ ಮೇರೆಗೆ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ನ್ಯಾಷನಲ್ ಚಾಂಪಿಯನ್‍ಶಿಪ್‍ಗಾಗಿ ತರಬೇತಿ ಪಡೆಯುತ್ತಿರುವ ದೂರುದಾತೆ, ತಾನು ಮತ್ತು ತನ್ನ ಕೋಚ್ ಎರಡು ವರ್ಷದಿಂದ ಪರಿಚಿತರು ಎಂದು ಹೇಳಿದ್ದಾರೆ.
ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಕೋಚ್ ತನ್ನನ್ನು ವರಿಸುವುದಾಗಿ ಭರವಸೆ ನೀಡಿದ್ದರು.
ಇತ್ತೀಚೆಗೆ ನನ್ನ ಹುಟ್ಟುಹಬ್ಬದ ಆಚರಣೆ ವೇಳೆ ಮನೆಗೆ ಬಂದಿದ್ದ ಅವರು ಅಮಲು ಪದಾರ್ಥ ಸೇರಿಸಿದ ಜ್ಯೂಸ್ ನೀಡಿ, ತಾನು ಪ್ರಜ್ಞೆ ಕಳೆದುಕೊಂಡಾಗ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ದೂರುದಾತೆ ಹೇಳಿರುವುದಾಗಿ ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯ ನಂತರ ನಾನು ಕೋಚ್ ಅವರನ್ನು ಭೇಟಿ ಮಾಡಿದಾಗ, ಅವರು ನನ್ನನ್ನು ಮದುವೆಯಾಗುವುದಿಲ್ಲ ಎಂದಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿಲ್ಲ ಎಂದು ಹೇಳಿದ ಕೋಚ್ ವಿರುದ್ಧ ನಾನು ಪ್ರತಿಭಟಿಸಲು ಮುಂದಾದಾಗ, ಅವರು ಹತ್ಯೆ ಬೆದರಿಕೆಯನ್ನೊಡ್ಡಿದ್ದಾರೆ ಎಂದು ಶೂಟರ್ ಹೇಳಿದ್ದಾರೆ.
ದೂರಿನನ್ವಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಭಾರತೀಯ ದಂಡ ಸಂಹಿತೆ 378 ಮತ್ತು 328 ಪರಿಚ್ಛೇದದಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
Comments are closed.