ವೆಲ್ಲಿಂಗ್ಟನ್: ಬಾಂಗ್ಲಾದೇಶ–ನ್ಯೂಜಿಲೆಂಡ್ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬೌನ್ಸರ್‌ನಿಂದ ತಲೆಗೆ ಪೆಟ್ಟು ಬಿದ್ದು ಬಾಂಗ್ಲಾ ನಾಯಕ ಮುಷ್ಫಿಕರ್ ರಹೀಮ್ ಆಸ್ಪತ್ರೆಗೆ ದಾಖಲಾಗಿದ್ದು, ಯಾವುದೇ ಅಪಾಯವಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಎಸೆದ ಬೌನ್ಸರ್ ನೇರ ರಹೀಮ್ ಅವರ ಹೆಲ್ಮೆಟ್‌ಗೆ ತಗುಲಿತು. ತಕ್ಷಣ ನೆಲಕ್ಕುರುಳಿದ ರಹೀಮ್ ಕೆಲಕಾಲ ಮೇಲೆಳಲಿಲ್ಲ. ಆಟ ಸ್ಥಗಿತಗೊಳಿಸಿ ಎರಡು ತಂಡದ ವೈದ್ಯಕೀಯ ಪಡೆ ಮೈದಾನಕ್ಕೆ ತೆರಳಿ ಪ್ರಥಮ ಚಿಕಿತ್ಸೆ ನೀಡಿದ್ದರು. ನಂತರ ರಹೀಮ್ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.
ಚಿಕಿತ್ಸೆ ಬಳಿಕ ಅವರಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ದೃಢಪಡಿಸಿದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಥಮ ಇನಿಂಗ್ಸ್ ನಲ್ಲಿ ಬಾಂಗ್ಲಾ ಬೌಲರ್ ತಸ್ಕಿನ್ ಅಹ್ಮದ್ ಎಸೆದ ಶಾರ್ಟ್ ಪಿಚ್ ಎಸೆತ ನ್ಯೂಜಿಲೆಂಡ್ ಆಟಗಾರ ಮಿಚೆಲ್ ಸ್ಯಾಂಟ್ನರ್ ಅವರ ಹೆಲ್ಮೆಟ್‌ಗೆ ತಗುಲಿತ್ತು.
ನ್ಯೂಜಿಲೆಂಡ್ ಆಟಗಾರ ನೀಲ್ ವ್ಯಾಗ್ನರ್‌ಗೆ ಬಾಂಗ್ಲಾ ಬೌಲರ್ ಕಮರುಲ್ ಇಸ್ಲಾಂ ಎಸೆದ ಬೌನ್ಸರ್‌ಗಳು ಮೂರು ಬಾರಿ ತಗುಲಿ ಅವರ ಗಲ್ಲದಿಂದ ರಕ್ತ ಸುರಿದಿತ್ತು. ವೆಲ್ಲಿಂಗ್ಟನ್ ಪಿಚ್ ಹಲವು ಅನಾಹುತಗಳಿಗೆ ಕಾರಣವಾಗಿದೆ.
Comments are closed.